ಒಡೆಯನಪುರ, ಆ. 26: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾಗಿ ಮತ್ತು ಜಿಲ್ಲಾ ಸಹಕಾರ ಬ್ಯಾಂಕ್‍ಗಳ ಹಂಗಾಮಿ ಎಂಡಿ ಆಗಿಯೂ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಗೊಂಡ ಶನಿವಾರಸಂತೆ ನಿವಾಸಿಯಾದ ಎಸ್.ಎಂ. ನಟರಾಜ್ ಅವರನ್ನು ಸಮೀಪದ ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ವತಿಯಿಂದ ಸಂಘದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಗಣೇಶ್, ಉಪಾಧ್ಯಕ್ಷ ಕೆ.ಸಿ. ಹಿತೇಶ್, ನಿರ್ದೇಶಕರುಗಳಾದ ಕೆ.ಎಂ. ವಿನೂತ್‍ಶಂಕರ್, ಎಂ.ಎಂ. ಕುಸುಮ, ಎಸ್.ವಿ. ನೇತ್ರ, ಎಂ.ಎಸ್. ಚಂದ್ರಶೇಖರ್, ನಾಗರಾಜು, ಬಿ.ಟಿ. ಶಿವರಾಜ್, ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ಎಚ್.ಬಿ. ಸುಮಂತ್, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಬಸಪ್ಪ, ಸಿಬ್ಬಂದಿಗಳಾದ ಎಂ.ವಿ. ಶೋಭ, ಎಚ್.ಎಂ. ಗೀತ, ಎಸ್.ಎಂ. ಹಸೈನರ್, ಕೆ.ಎಸ್. ಸಂತೋಷ್, ಸೋಮಶೇಖರ್ ಮುಂತಾದವರು ಇದ್ದರು.