ಕುಶಾಲನಗರ, ಆ. 26: ಕುಶಾಲನಗರ ಕಾವೇರಿ ಹೊಳೆ ಸೇತುವೆ ಬಿರುಕು ಬಿಟ್ಟಿರುವ ವರದಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಕಾವೇರಿ ನದಿ ಪ್ರವಾಹದಿಂದ ಸೇತುವೆ ಕೆಳಭಾಗದಲ್ಲಿ ಕಲ್ಲುಕಟ್ಟಡಗಳು ಕುಸಿದು ಸೇತುವೆಯ ಒಂದು ಪಾಶ್ರ್ವದಲ್ಲಿ ಬಿರುಕು ಕಂಡ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಬೆನ್ನಲ್ಲೇ ಪ್ರಾಧಿಕಾರದ ಕೊಡಗು ಜಿಲ್ಲಾ ಸೆಕ್ಷನ್ ಅಧಿಕಾರಿ ಹಾಲಪ್ಪ ಅವರು ಪರಿಶೀಲನೆ ನಡೆಸಿದರು.

ನೀರಿನ ಒತ್ತಡ ಅಧಿಕವಾದ ಹಿನ್ನೆಲೆಯಲ್ಲಿ ಸೇತುವೆಯ ರಿವಿಟ್‍ಮೆಂಟ್ ಕುಸಿದಿದೆ. ಇದನ್ನು ಸರಿಪಡಿಸಲಾಗುವದು. ಸಂಪರ್ಕ ವ್ಯವಸ್ಥೆಗೆ ಯಾವದೇ ಅಪಾಯ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವದು ಎಂದು ಹಾಲಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ನೀರು ನದಿಯಲ್ಲಿ ಹರಿದ ಹಿನೆÀ್ನಲೆಯಲ್ಲಿ ಕೊಪ್ಪ, ಕುಶಾಲನಗರದ ತಾವರೆಕೆರೆ ವ್ಯಾಪ್ತಿಯಲ್ಲಿ ಹೆದ್ದಾರಿ ಮೇಲೆ 3 ದಿನಗಳ ಕಾಲ ನೀರು ಹರಿದು ರಸ್ತೆ ಸಂಪರ್ಕ ವ್ಯವಸ್ಥೆ ಕಡಿತಗೊಂಡಿತ್ತು. ಈ ವ್ಯಾಪ್ತಿಯಲ್ಲಿ ರಸ್ತೆಯನ್ನು ಎತ್ತರಗೊಳಿಸುವ ದರೊಂದಿಗೆ ಅಭಿವೃದ್ಧಿ ಮಾಡಲಾಗುವದು ಎಂದು ತಿಳಿಸಿದ್ದಾರೆ.

ಉಳಿದಂತೆ ಕುಶಾಲನಗರ ಸಂಪಾಜೆ ವ್ಯಾಪ್ತಿಯಲ್ಲಿ ಹೆದ್ದಾರಿಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ. ಮಡಿಕೇರಿ ಸಮೀಪ ರಸ್ತೆಯಲ್ಲಿ ಬಿರುಕೊಂದು ಕಂಡುಬಂದ ಹಿನೆÀ್ನಲೆಯಲ್ಲಿ ತಕ್ಷಣ ಸರಿಪಡಿಸಲಾಗಿದೆ. ಉಳಿದಂತೆ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿಲ್ಲ ಎಂದು ಮಾಹಿತಿ ನೀಡಿದರು.