ಬಡುಬನಹಳ್ಳಿ : ಬಡುಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 73ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಮುಖ್ಯೋಪಾದ್ಯಾಯ ಸುಂದರ್ ನೆರವೇರಿಸಿದರು. ದಿನದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಶಿಕ್ಷಕರಾದ ದಿನೇಶ್, ರಾಜ್ಕುಮಾರ್, ಕೆ. ವಿ. ಜಾನ್ಸಿ ದಿನದ ಮಹತ್ವದ ಕುರಿತು ಮಾತಾಡಿದರು. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಆಕರ್ಷಕ ಪಥಸಂಚಲನ ನಡೆಯಿತು. ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಟಿ ಶರ್ಟ್ಗಳನ್ನು ವಿತರಿಸಲಾಯಿತು. ಒಡೆಯನಪುರ : ಇಲ್ಲಿಗೆ ಸಮಿಪದ ಶನಿವಾರಸಂತೆ ಪಟ್ಟಣದ ವಿವಿಧ ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು ಸೇರಿದಂತೆ ಶನಿವಾರಸಂತೆ ವಿವಿಧೆಡೆಯಲ್ಲಿ 73ನೇ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪಟ್ಟಣದ ವಿಘ್ನೇಶ್ವರ ಬಾಲಕಿಯರ ಸಂಯುಕ್ತ ಪ.ಪೂ.ಕಾಲೇಜಿನಲ್ಲಿ ನಡೆದ 73ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ.ಸುಬ್ರಮಣಿ ಧ್ವಜರೋಹಣ ನೆರವೇರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಶಿವಪ್ರಕಾಶ್, ಆಡಳಿತ ಮಂಡಳಿಯ ನಿರ್ದೇಶಕರು ಹಾಜರಿದ್ದರು. ಪಟ್ಟಣದ ಭಾರತಿ ಪ್ರಥಮ ದರ್ಜೆ ಕಾಲೇಜು, ಪ.ಪೂ.ಕಾಲೇಜು, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕಾವೇರಿ ವಿದ್ಯಾಸಂಸ್ಥೆ, ಸೆಕ್ರಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ 73ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಶನಿವಾರಸಂತೆ ನಿವೃತ್ತ ಸೈನಿಕ ಸಂಘದ ವತಿಯಿಂದ 73ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಂ.ಎನ್.ಧರ್ಮಪ್ಪ ರಾಷ್ಟ್ರ ಧ್ವಜರೋಹಣ ನೆರವೇರಿಸಿದರು, ಈ ಸಂದರ್ಭದಲ್ಲಿ ಸಂಘದ ಸದಸ್ಯರು ಮತ್ತು ನಿವೃತ್ತ ಸೈನಿಕರು ಹಾಜರಿದ್ದರು. ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷ ಮಹಮದ್ಗೌಸ್ ಧ್ವಜರೋಹಣ ನೆರವೇರಿಸಿದರು. ನಂತರ ದಿನದ ಮಹತ್ವದ ಕುರಿತು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಅಕ್ಮಲ್ ಪಾಷ, ಮಸೀದಿ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಮುಸ್ಲಿಮ್ ಬಾಂಧವರು ಹಾಜರಿದ್ದರು.
ಸಮಿಪದ ಮೂದರಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ 73ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಶುಭು ರಾಷ್ಟ್ರ ಧ್ವಜರೋಹಣ ನೆರವೇರಿಸಿದರು. ನಂತರ ರೋಟರಿ ಕ್ಲಬ್ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಶ್ವೆಟರ್ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಜರಿದ್ದರು.
ಸಮಿಪದ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ 73ನೇ ಸ್ವತಂತ್ರ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಲೂರುಸಿದ್ದಾಪುರ ಮಲ್ಲೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಇ.ತಮ್ಮಯ್ಯ ಧ್ವಜರೋಹಣ ನೆರವೇರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಮೇನೆಜಿಂಗ್ ಟ್ರಸ್ಟ್ ಎಚ್.ಕೆ.ಶಿವಪ್ರಕಾಶ್ ಅಧ್ಯಕ್ಷತೆವಹಿಸಿದರು, ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಸರಿತ ಶಿವಪ್ರಕಾಶ್, ರೋಟರಿ ಕ್ಲಬ್ ಕಾರ್ಯದರ್ಶಿ ಸಂಪತ್ಕುಮಾರ್, ವಿಎಸ್ಎಸ್ಎನ್ ನಿರ್ದೇಶಕರುಗಳಾದ ಪಿ.ಕೆ.ಭರತ್ಕುಮಾರ್, ಎಂ.ಸಿ.ಕಾವೇರಪ್ಪ, ರೋಟರಿ ಕ್ಲಬ್ ಪದಾಧಿಕಾರಿಗಳು ಹಾಗೂ ವಿದ್ಯಾಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು. ರೋಟರಿ ಸಂಸ್ಥೆ : ಒಡಯನಪುರ ಸಮಿಪದ ಆಲೂರುಸಿದ್ದಾಪುರ ಮಲ್ಲೇಶ್ವರ ರೋಟರಿ ಕ್ಲಬ್ ಮತ್ತು ಹೊಸಗುತ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹೊಸಗುತ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 73ನೇ ಸ್ವತಂತ್ರ್ಯೋತ್ಸವ ಕಾರ್ಯಕ್ರಮ ಹಾಗೂ ರೋಟರಿ ಕ್ಲಬ್ನಿಂದ ವಿದ್ಯಾರ್ಥಿ ಗಳಿಗೆ ಟಿ-ಶರ್ಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲಾ ಆವರಣದಲ್ಲಿ ಬೆಳಗ್ಗೆ 9-30ಕ್ಕೆ ನಡೆದ 73ನೇ ಸ್ವತಂತ್ರ ದಿನಾಚರಣೆಯ ಧ್ವಜರೋಹಣವನ್ನು ಆಲೂರುಸಿದ್ದಾಪುರ ಮಲ್ಲೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಇ.ತಮ್ಮಯ್ಯ ನೆರವೇರಿಸಿದರು. ಶಾಲೆಯ ಹಿರಿಯ ಶಿಕ್ಷಕ ರಾಜಮುಡಿ ಮಾತನಾಡಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಪವಿತ್ರ, ರೋಟರಿ ಕ್ಲಬ್ ಕಾರ್ಯದರ್ಶಿ ಸಂಪತ್ಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ಆಲೂರುಸಿದ್ದಾಪುರ ಗ್ರಾ.ಪಂ.ಅಧ್ಯಕ್ಷೆ ವೀಣ ರಮೇಶ್, ಗ್ರಾ.ಪಂ.ಪಿಡಿಒ ಪೂರ್ಣಿಮಾ, ನಿವೃತ್ತ ಯೋಧ ಪಿ.ಎನ್. ಗಂಗಾಧರ್, ಅಂಗನವಾಡಿ ಶಿಕ್ಷಕಿ ಗಾಯತ್ರಿ, ಶಾಲಾ ಮುಖ್ಯ ಶಿಕ್ಷಕಿ ರೇಖ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ಆಲೂರುಸಿದ್ದಾಪುರ ಮಲ್ಲೇಶ್ವರ ರೋಟರಿ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ದಿನದ ಮಹತ್ವ ಕುರಿತು 4 ವರ್ಷದ ಪುಟಾಣಿ ವಿದ್ಯಾರ್ಥಿ ಲವೀನ್ ಚಂಗಪ್ಪ ಆಂಗ್ಲ ಭಾಷೆಯಲ್ಲಿ ಸಲಲಿತವಾಗಿ ಮಾತನಾಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರನ್ನು ಅಚ್ಚರಿಗೊಳಿಸಿದ. ರೋಟರಿ ಕ್ಲಬ್ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಟಿ-ಶರ್ಟ್ಗಳನ್ನು ಹಾಗೂ ಸಿಹಿತಿಂಡಿ ವಿತರಿಸಲಾಯಿತು. - ವಿ.ಸಿ.ಸುರೇಶ್ ಒಡೆಯನಪುರ *ಗೋಣಿಕೊಪ್ಪಲು : ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ದೇಶದ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹಿರಿಯರನ್ನು ಸ್ಮರಿಸಿಕೊಳ್ಳುವದು ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಹೇಳಿದರು. ಧ್ವಜಾರೋಹಣ ಮಾಡಿದ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸಹ ಕಾರ್ಯದರ್ಶಿ ಪೋಡಮಾಡ ಮೋಹನ್ ವಿದ್ಯಾರ್ಥಿಗಳು ಸ್ವಾತಂತ್ರ್ಯಯೋಧರ ಹೋರಾಟ ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.
ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್ ಮಾತನಾಡಿದರು. ಆಡಳಿತ ಮಂಡಳಿ ನಿರ್ದೇಶಕ ಅಳಮೇಂಗಡ ಸುರೇಶ್ ಸುಬ್ಬಯ್ಯ, ಕಾಫಿ ಬೆಳೆಗಾರ ಎಂ.ಕೆ ಮೊಣ್ಣಪ್ಪ, ಉಪನ್ಯಾಸಕರಾದ ಎನ್. ಕೆ. ಪ್ರಭು, ಪ್ರತಿಭಾ ಉತ್ತಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಪಿ. ಎ. ಪ್ರಭುಕುಮಾರ್, ಶಿಕ್ಷಕರರಾದ ಬೆನಡಿಕ್ಟ ಫರ್ನಾಂಡೀಸ್, ಜಯಣ್ಣ, ತಿಮ್ಮರಾಜು, ಕಚೇರಿ ಸಿಬ್ಬಂದಿಗಳಾದ ಜಯಪ್ಪ, ಎ.ಪಿ. ಸುರೇಶ್ ಹಾಜರಿದ್ದರು.
ಇತ್ತೀಚೆಗೆ ಬಾಳೆಲೆಯಲ್ಲಿ ಗುಂಡೇಟಿಗೆ ಬಲಿಯಾದ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ ಅವರ ರಕ್ಷಣೆಗೆ ಧಾವಿಸಿದ ಸಂದರ್ಭದಲ್ಲಿ ಗುಂಡೇಟು ತಿಂದ ವಿದ್ಯಾರ್ಥಿ ವೈ,ಕೆ.ದಿನೇಶ್, ಕಾರ್ಮಿಕ ಅಪ್ಪು ಅವರಿಗೆ ಶಿಕ್ಷಕಿ ತಂದೆ ಮೊಣ್ಣಪ್ಪ ಧನಸಹಾಯ ಮಾಡಿದರು. - ಎನ್.ಎನ್.ದಿನೇಶ್ಮಡಿಕೇರಿ : ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಾಲಮಂದಿರದಲ್ಲಿ ಮಕ್ಕಳೊಂದಿಗೆ ಆಚರಿಸಲಾಯಿತು. ರೋಟರಿ ಮಿಸ್ಟ್ರಿಹಿಲ್ಸ್ ಅಧ್ಯಕ್ಷ ಎಂ. ಆರ್. ಜಗದೀಶ್ ಮತ್ತು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಟಿ. ಡಿ. ತಿಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು.
ಡಾ || ಟಿ. ಡಿ. ತಿಮ್ಮಯ್ಯ ಸ್ವತಂತ್ರ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಅವಕಾಶಗಳು ಬರುತ್ತವೆ. ಅದನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದೂ ಅವರು ಕಿವಿ ಮಾತು ಹೇಳಿದರು. ರೋಟರಿ ಮಿಸ್ಟಿಹಿಲ್ಸ್ನ ಅಧ್ಯಕ್ಷ ಎಮ್. ಆರ್. ಜಗದೀಶ್ ಹುಟ್ಟು ಸಾಮಾನ್ಯವಾಗಿದ್ದರೂ, ಸಾವು ಚರಿತ್ರೆಯಾಗಿರಬೇಕು ಎಂದು ಹೇಳಿದರು.
ಮಕ್ಕಳು ದೇಶ ಪ್ರೇಮದ ಹಾಡು, ನೃತ್ಯ ಭಾಷಣಗಳ ಮೂಲಕ ಮನ ಸೆಳೆದರು. ರೋಟರಿ ಮಿಸ್ಟಿ ಹಿಲ್ಸ್ನ ಕಾರ್ಯದರ್ಶಿ ಪ್ರಮೋದ್ಕುಮಾರ್ ರೈ ವಂದಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸುಂಟಿಕೊಪ್ಪ : ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರನ್ನು ಕೇವಲವಾಗಿ ಕಾಣದೆ ಅವರಿಗೆ ಗೌರವ ನೀಡುವ ಪ್ರವೃತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಸುಂಟಿಕೊಪ್ಪ ಠಾಣೆಯ ಠಾಣಾಧಿಕಾರಿ ಜಯರಾಂ ಕರೆನೀಡಿದರು. ಇಲ್ಲಿನ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾದ 73ನೇ ಸ್ವಾತಂತ್ರ್ಸೋತ್ಸವ ಸಮಾರಂಭ ದಲ್ಲಿ ಮುಖ್ಯ ಬಾಷಣಕಾರರಾಗಿ ಆಗಮಿಸಿ ಮಾತನಾಡಿದರು. ಡಿ. ಚೆನ್ನಮ್ಮ ಜೂನಿಯರ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಲೆಪ್ಟ್ನೆಂಟ್ ಕರ್ನಲ್ ಬಿಜಿವಿ ಕುಮಾರ್ ಮಾತನಾಡಿ ನಮ್ಮ ಪ್ರಜಾಪ್ರಭುತ್ವ ಶಕ್ತಿ ಕಾಪಾಡಲು ಯುವ ಪೀಳಿಗೆ ಮುಂದಾಗಬೇಕಿದೆ. ಗಾಂಧೀಜಿಯವರ ಆದರ್ಶ ಮೈಗೂಡಿಕೊಳ್ಳ ಬೇಕು. ವಿದ್ಯಾರ್ಥಿಗಳು ಸಮಯ ಪಾಲನೆಗೆ ಹೆಚ್ಚಿನ ಗಮನ ನೀಡಬೇಕು. ಎಂತಹ ಸಂದರ್ಭದಲ್ಲೂ ಸುಳ್ಳು ಹೇಳಬಾರದು ಎಂದರು. ಅಧ್ಯಕ್ಷತೆ ವಹಿಸಿದ್ದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆದ ರೋಸ್ಮೇರಿ ರಾಡ್ರೀಗಸ್ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಕೋರಿದರು. ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಮಾತನಾಡಿದರು. 40 ವರ್ಷಗಳ ಕಾಲ ಪೌರ ಕಾರ್ಮಿಕಾರಾಗಿ ದುಡಿದು ನಿವೃತರಾದ ರಾಜು ಹಾಗೂ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಾದ ಜುಲ್ಪಿಕರ್ ಆಲಿ,ಪುವ್ವಮ್ಮ,ಸಂಶೀರಾ,ಫಸೀಲ ಇವರು ಗಳನ್ನು ಶಾಲು ಹೋದಿಸಿ ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಭಾಷಣ ದೇಶ ಭಕ್ತಿ ಗೇತೆ ಹಾಡಿದರು. ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಪಿ.ಆರ್ ಸುಕುಮಾರ್, ಕಂದಾಯ ಇಲಾಖೆಯ ಪ್ರಭಾರ ಉಪತಹಶೀಲ್ದಾರ್ ಶಿವಪ್ಪ, ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಎ.ಉಸ್ಮಾÀನ್, ಲಯನ್ಸ್ ಕ್ಲಬ್ ಅಧ್ಯಕ್ಷ ಗ್ಲೇನ್ ಮೇನೆಜೇಸ್, ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಮುತ್ತಯ್ಯ, ಮೊಗೇರ ಸಮಾಜದ ಅಧ್ಯಕ್ಷ ಮಂಜುನಾಥ್, ವರ್ಕ್ಸಾಪ್ ಮಾಲಿಕರ ಸಂಘದ ಅಧ್ಯಕ್ಷ ವಿ.ಎ.ಸಂತೋಷ್, ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾ ಮೇದಪ್ಪ ಕೊಡಗು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಫ ವಾಸ್, ಶಾಲಾ ಕಾಲೇಜಿನ ಉಪನ್ಯಾಸಕರು ಶಿಕ್ಷಕರು ಗ್ರಾಮ ಪಂಚಾಯಿತಿ ಸಂಘ ಸಂಸ್ಥೆಗಳ ಅಧ್ಯಕ್ಷರು ಸದಸ್ಯರು ಹಾಜರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ಎಂ.ಎಸ್. ಸುನೀಲ್ ನಿರೂಪಿಸಿದರು ಉಪಾಧ್ಯಕ್ಷ ಪಿ. ಎಫ್. ಸಭಾಸ್ಟಿನ್ ಸ್ವಾಗತಿಸಿದರೆ, ವಂದನಾರ್ಪಣೆಯನ್ನು, ಸಂಘಟಣಾ ಕಾರ್ಯದರ್ಶಿ ತಾಹೀರ ನೆರವೇರಿಸಿದರು.ಸೈನಿಕ ಶಾಲೆಯಲ್ಲಿ : ಕೂಡಿಗೆ ಸೈನಿಕ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಆರ್ ಆರ್ ಲಾಲ್ ಅವರು ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ರಾಷ್ಟ್ರದ ಸ್ವಾತಂತ್ರ್ಯ ಮತ್ತು ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮತ್ತು ತ್ಯಾಗ ಮಾಡಿದ ವೀರರ ಚರಿತ್ರೆಯನ್ನು ಸ್ಮರಿಸುತ್ತಾ, ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಅರ್ಪಿಸಿಕೊಂಡು ಹುತಾತ್ಮರಾದ ವೀರ ನಾಯಕರ ಗುಣಗಾನ ಮಾಡಿದರು. ನಂತರ ಶಾಲೆಯ ವಿದ್ಯಾರ್ಥಿ ಕೆಡೆಟ್ ಬಿ.ಎಂ.ವಿನಯ್ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಭಾಷಣ ಮಾಡಿದರು. ಶಾಲಾ ವಿದ್ಯಾರ್ಥಿಗಳು ಪಥಸಂಚಲನ ನಡೆಸಿಕೊಟ್ಟರು. ವಿದ್ಯಾರ್ಥಿಗಳು ದೇಶದ ಸಾರ್ವಭೌಮತೆ, ಐಕ್ಯತೆ ಮತ್ತು ವೀರತೆಯನ್ನು ಪ್ರದರ್ಶಿಸುವ ನೃತ್ಯ ಮತ್ತು ಗಾಯನವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಆರ್ ಕೆ ಡೇ, ಶಾಲೆಯ ವೈದ್ಯಾಧಿಕಾರಿ ಡಾ. ಹೆಚ್ ಮಹೇಶ್, ಹಿರಿಯ ಶಿಕ್ಷಕ ಎಸ್ ಸೂರ್ಯನಾರಾಯಣ, ಬೋಧಕ, ಬೋಧಕೇತರ ವರ್ಗದವರು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಮಡಿಕೇರಿ: ಮಡಿಕೇರಿಯ ಕಾವೇರಿ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸ ಲಾಯಿತು. ಸಂಘದ ಅಧ್ಯಕ್ಷ ಜೈ ಜಗದೀಶ್ ಧ್ವಜಾರೋಹಣ ನೇರವೇರಿಸಿ ದರು. ಕಾರ್ಯಕ್ರಮದಲ್ಲಿ ತೆನ್ನಿರ ಮೈನಾ ಸಂಘದ ಉಪಾಧ್ಯಕ್ಷ ಇರ್ಷಾದ್, ಪದಾಧಿಕಾರಿಗಳಾದ ಎಂ.ಕೆ.ಖಾದರ್, ಶ್ಯಾಂ ಸುಬ್ಬಯ್ಯ, ಕೆ.ಆರ್. ನಾಗೇಶ್, ಕುಯ್ಯಮುಡಿ ರಾಜೇಶ್, ಕೆ.ಕೆ. ಸಂತೋಷ್ ಬಿ.ಜೆ. ಸತೀಸ್, ಮಲ್ಲನ ರಾಜೇಶ್, ನೂರ್ ಅಹಮ್ಮದ್, ಮಂದಪಂಡ ನಂದಾ, ಯಂಕನ ಪ್ರಶಾಂತ್, ಪಿ. ಕುಮಾರ್, ಬಿ.ಬಿ. ದಿನೇಶ್, ಟಿ.ಎನ್.ಸತೀಶ್, ಹುಸೇನ್, ದರ್ಶನ್ ಬೊಳ್ಳೆರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇತ್ತೀಚೆಗೆÉ ಪ್ರಾಕೃತಿಕ ವಿಕೋಪದಲ್ಲಿ ಮೃತ ಪಟ್ಟವರಿಗೆ ಮತ್ತು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಾಮಳೆಯ ವಿಕೋಪದಲ್ಲಿ ಸಂತ್ರಸ್ತರಾದ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಿಸಿದ ರೋಟರಿ ಸಂಘದ ಅಧ್ಯಕ್ಷÀ ರವಿಕುಮಾರ್, ಡಾ.ಪ್ರಶಾಂತ್ ಮತ್ತು ರೋಟರಿ ಸದಸ್ಯರಿಗೆ ಸಭೆಯಲ್ಲಿ ಧನ್ಯವಾಗಳನ್ನು ಅರ್ಪಿಸಲಾಯಿತು.
ಕೂಡಿಗೆ : ಸರ್ಕಾರಿ ಪ.ಪೂ.ಕಾ.ನಲ್ಲಿ 73ನೇ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ. ಕೆ. ನಾಗರಾಜಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಿರುವದು ಸತ್ಯ, ಆದರೆ ಸ್ವಾತಂತ್ರ್ಯಕ್ಕೋಸ್ಕರ ದುಡಿದ ಗಣ್ಯರ ಕನಸು ನನಸಾಗುತ್ತಿಲ್ಲ. ದೇಶದಲ್ಲಿ ಯುವ ಶಕ್ತಿ ಹಾದಿ ತಪ್ಪುತ್ತಿದೆ. ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದು 73ನೇ ವರ್ಷಕ್ಕೆ ಕಾಲಿಟ್ಟಿದೆ. ದೇಶವು ಪ್ರಪಂಚದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಮಾನಕ್ಕೆ ಬೆಳೆದಿರುವದು ತಮಗೆಲ್ಲ ಸಂತೋಷದ ಸಂಗತಿ. ಇಂತಹ ಸಂದರ್ಭ ವಿಜ್ಞಾನ, ತಂತ್ರಜ್ಞಾನಗಳ ಜೊತೆಗೆ ಸೈನಿಕರ ಬಲ ಹೆಚ್ಚುವಿಕೆಯ ಮೂಲಕ ದೇಶವು ಪ್ರಗತಿಯತ್ತ ಸಾಗುತಿದೆ. ಎಲರೂ ದೇಶ ಪ್ರೇಮ ಬೆಳೆಸಿಕೊಳ್ಳುವ ಮೂಲಕ ದೇಶಕ್ಕೆ ಕೀರ್ತಿ ತರುವ ಕಾಯಕದಲ್ಲಿ ತೊಡಗಬೇಕೆಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಮಹಲಿಂಗಯ್ಯ ಅವರು ದಿನದ ಮಹತ್ವ ಕುರಿತು ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಕಾವೇರಮ್ಮ, ಸತೀಶ್, ರಮೇಶ್, ಹನುಮರಾಜು, ಪಲ್ಲವಿ, ಸೂಸಿಚಂಗಚ್ಚನ್, ಲಿಮೆತ್, ಹಾಗೂ ವಿದ್ಯಾರ್ಥಿಗಳು ಇದ್ದರು. ಕೂಡಿಗೆ : ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ 73ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಹಕಾರ ಸಂಘದ ಅಧ್ಯಕ್ಷ ಕೆ. ಕೆ. ಹೇಮಂತ್ಕುಮಾರ್ ನೆರವೇರಿಸಿ, ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಟಿ.ಪಿ.ಹಮೀದ್, ನಿರ್ದೇಶP ಎಸ್.ಎನ್.ರಾಜಾರಾವ್, ಟಿ.ಕೆ.ವಿಶ್ವನಾಥ್, ತಮ್ಮಣ್ಣೇಗೌಡ, ಕೆ. ಕೆ. ಭೋಗಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮೀನಾ, ಸಿಬ್ಬಂದಿಗಳಾದ ಸೋಮಶೇಖರ್, ನಾಗರಾಜ್ ಮತ್ತಿತರರು ಇದ್ದರು. ಕೂಡಿಗೆ : ಕೂಡಿಗೆ ಗ್ರಾ.ಪಂ ವತಿಯಿಂದ ಗ್ರಾ.ಪಂ ಆವರಣದಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾ.ಪಂ ಅಧ್ಯಕ್ಷೆ ಪ್ರೇಮಾಲೀಲಾ ನೆರವೇರಿಸಿದರು. ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಕೆ.ಟಿ.ಗಿರೀಶ್ಕುಮಾರ್, ಗ್ರಾ.ಪಂನ ಸದಸ್ಯರಾದ ಕಲ್ಪನ, ಪುಷ್ಪ, ರತ್ನಮ್ಮ, ಕೃಷ್ಣ, ಮೋಹಿನಿ, ಜಯಶ್ರೀ, ಚಂದ್ರಿಕಾ, ಹೆಚ್.ಎಸ್.ರವಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಶಿಲ್ಪ, ಸಿಬ್ಬಂದಿ ವರ್ಗದವರು ಇದ್ದರು.
ಗುಡ್ಡೆಹೊಸೂರು : ಸಮೀಪದ ಬಸವನಹಳ್ಳಿಯ ಸರಕಾರಿ ಪ್ರೌಢಶಾಲೆಯ 2001-2002ನೇ ಸಾಲಿನ ಹಳೆ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ಅಲ್ಲಿನ ವಿಜಾÐನ ಕೊಠಡಿಗೆ ಸುಮಾರು 50 ಸಾವಿರ ರೂ.ಗಳ ಖರ್ಚಿನಲ್ಲಿ ವಿದ್ಯಾರ್ಥಿಗಳಾದ ಡೀನಾಪಿಂಟ್, ಗಣೇಶ್, ಪ್ರಕಾಶ್, ವಿನೋದ್, ಶಾಜುದ್ದೀನ್, ಮಮತ, ಸುಮಿತ್ರ ಇವರುಗಳು ಉದಾರವಾಗಿ ಪ್ರದರ್ಶನ ಕಪಾಟನ್ನು ನೀಡಿದರು. ಶಾಲಾ ಮುಖ್ಯ ಶಿಕ್ಷಕರಾದ ಕೃಷ್ಣನಾಯಕ್, ವಿಜ್ಞಾನ ಶಿಕ್ಷಕರಾದ ವೆಂಕಟೇಶ್ ಮತ್ತು ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ ಮತ್ತು ಸದಸ್ಯರುಗಳು ಹಾಜರಿದ್ದರು. ನಂತರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಕೊಡಗಿನಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸರಳ ಸಮಾರಂಭ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತರಾದ ಬಿ. ಎಸ್. ಧನಪಾಲ್ ಹಾಜರಿದ್ದು ದಿನದ ಮಹತ್ವದ ಬಗ್ಗೆ ಮಾತನಾಡಿದರು. - ಗಣೇಶ್ಕುಡೆಕ್ಕಲ್.
ಹೆಬ್ಬಾಲೆ: ಹೆಬ್ಬಾಲೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 73ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ಯೋಧ ಎನ್.ಬಿ.ಉಮೇಶ್ ಅವರು ನೆರವೇರಿಸಿ, ದಿನದ ಮಹತ್ವದ ಕುರಿತು ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್. ಆರ್. ಶ್ರೀನಿವಾಸ್, ರೇಷ್ಮೆ ಮಂಡಳಿ ಮಾಜಿ ಸದಸ್ಯ ಹೆಚ್. ಕೆ. ನಾರಾಯಣ್, ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸ್ವದೇಶ್ಕುಮಾರ್, ಕಾರ್ಯದರ್ಶಿ ಎಚ್.ಆರ್.ನಾಗೇಂದ್ರ, ಗುರುವಂದನಾ ಸಮಿತಿಯ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಥಮ ದರ್ಜೆ ಗುತ್ತಿಗೆದಾರ ಹೆಚ್.ಆರ್.ಮಂಜುನಾಥ್, ಕಾಲೇಜಿನ ಪ್ರಾಂಶುಪಾಲ ಎಸ್.ಎನ್.ಧರ್ಮಪ್ಪ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.
ವೀರಾಜಪೇಟೆ : ವೀರಾಜಪೇಟೆ ವಿಭಾಗದಲ್ಲಿ ಪ್ರಕೃತಿ ವಿಕೋಪದಿಂದ ಸಾಕಷ್ಟು ಅನಾಹುತಗಳು, ದುರಂತಗಳು ಸಂಭವಿಸಿವೆ. ಪ್ರಕೃತಿ ವಿಕೋಪವನ್ನು ತಡೆಯಲು ಅದರಿಂದ ಎಚ್ಚರ ವಹಿಸಲು ಪಟ್ಟಣದ ನಿವಾಸಿಗಳು ಮುಂಜಾಗರೂ ಕ್ರಮ ವಹಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ. ಎಂ. ಶ್ರೀಧರ್ ಹೇಳಿದರು. ಧ್ವಜರೋಹಣ ಮಾಡಿದ ಶ್ರೀಧರ್ ಅವರು ನೆರೆದವರನ್ನು ದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಎಲ್ಲ ಸದಸ್ಯರುಗಳು, ಕಚೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಮಡಿಕೇರಿ : ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ 73ನೇ ಸ್ವಾತಂತ್ರ್ಯ ದಿನವನ್ನು ಆಚರಿಸ ಲಾಯಿತು. ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕ ಡಾ. ವಿಜಯ್ ಅಂಗಡಿ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟ ಗಾರರನ್ನು ಸ್ಮರಿಸಿದರು. ಪ್ರತಿಯೊಬ್ಬರೂ ರಾಷ್ಟ್ರದ ಒಳಿತಿಗಾಗಿ ನಿಷ್ಠೆಯಿಂದ ಕಾಯಕದಲ್ಲಿ ತೊಡಗಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆಕಾಶವಾಣಿಯ ಹಿರಿ?