ಸುಂಟಿಕೊಪ್ಪ, ಆ. 25: ಪ್ರಾಥಮಿಕ ಪ್ರೌಢ ಶಿಕ್ಷಣವು ವಿದ್ಯಾರ್ಥಿಗಳ ಪ್ರಮುಖ ಘಟ್ಟವಾಗಿದೆ ವಿದ್ಯಾರ್ಥಿಗಳು ಈ ಹಂತದಲ್ಲೇ ತಮ್ಮ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಲೆಕ್ಕ ಪರಿಶೋಧಕ ಕೆ.ಜಿ.ರಾಘವೇಂದ್ರ ಪ್ರಸಾದ್ ಹೇಳಿದರು.

ಲೆಕ್ಕ ಪರಿಶೋಧಕರಾಗಿ ದೇಶದಲ್ಲಿ 34 ರ್ಯಾಂಕ್ ಪಡೆದ ರಾಘವೇಂದ್ರ ಪ್ರಸಾದ್ ಅವರಿಗೆ ಆಯೋಜಿಸಲಾದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದÀರು.

ದೀಪ್ತಿ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಎನ್.ಇ. ಜೀಜಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ನಾಣ್ಣುಡಿಯಂತೆ ಶಿಕ್ಷಕ ಹಾಗೂ ಪೋಷಕರೊಂದಿಗೆ ನಯ ವಿನಯತೆಯನ್ನು ಮೈಗೂಡಿಸಿಕೊಂಡಿದ್ದ ರಾಘವೇಂದ್ರ ಪ್ರಸಾದ್ ಈ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾಡಿದ್ದು ಹತ್ತನೇ ತರಗತಿಯಲ್ಲಿ ಗಣಿತ ವಿಷಯದಲ್ಲಿ 100 ಅಂಕಗಳಿಸುವ ಸಾಧನೆ ಮಾಡಿದರಲ್ಲದೆ ಶಾಲೆಗೂ ಪೋಷಕರಿಗೂ ಕೀರ್ತಿಯನ್ನು ತಂದಿದ್ದಾರೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಸತ್ಯದಾಸ್, ಶಿಕ್ಷಕರುಗಳಾದ ಲೀಸ್ ಟೋಮ್, ಜಿನ್ಸಿ ತೋಮಸ್, ಉಷಾ, ಎಲ್ಸಿಲೆಟಾ, ಎಚ್.ಆರ್. ಸರೋಜ, ಸೌಮ್ಯ, ಬಿ.ಜಿ. ಸುನೀತಾ, ಅಮೃತ, ಪವಿತ ಪೋಷಕಿ ಸುಧಾ ಮತ್ತಿತರರು ಇದ್ದರು.

ಪೊಲೀಸ್ ಠಾಣೆಯಲ್ಲಿ ಕಳೆದ 2 ವರ್ಷಗಳಿಂದ ಪಿಎಸ್‍ಐ ಆಗಿ ಇದೀಗ ಕರ್ನಾಟಕ ಲೋಕಾಯುಕ್ತ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಜಯರಾಮ್ ಅವರನ್ನು ಸುಂಟಿಕೊಪ್ಪದ ಗ್ರಾಮಸ್ಥರ ಪರವಾಗಿ ಗೌರವಿಸಿ ಬೀಳ್ಕೋಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯರಾಮ್ ಕಳೆದ 2 ವರ್ಷಗಳಿಂದ ಈ ಠಾಣೆಯಲ್ಲಿ ಸೇವೆ ಸಲ್ಲಿಸಿರುವದು ತೃಪ್ತಿ ತಂದಿದೆ ಎಂದರು.

ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಕಸಾಪ ಅಧ್ಯಕ್ಷ ಸುನಿಲ್, ಮಾಜಿ ಗ್ರಾ.ಪಂ.ಅಧ್ಯಕ್ಷ ಪಿ.ಎಫ್. ಸಭಾಸ್ಟಿನ್ ಮಾತನಾಡಿದರು.

ಮಾಜಿ ಗ್ರಾ.ಪಂ.ಅಧ್ಯಕ್ಷೆ ಬಿ.ಐ.ಭವಾನಿ, ಸದಸ್ಯರಾದ ಸೋಮಯ್ಯ, ಜ್ಯೋತಿ, ನಾಗರತ್ನ, ಗಿರೀಜಾ, ಆಟೋ ಚಾಲಕರ ಸಂಘದ ಅಧ್ಯಕ್ಷ ಬಿ.ಕೆ. ಪ್ರಶಾಂತ್, ರಂಜಿತ್, ಕರವೇ ಅಧ್ಯಕ್ಷ ನಾಗೇಶ್ ಪೂಜಾರಿ, ಶಶಿ, ರಾಕೇಶ್, ವಿನ್ಸೆಂಟ್, ಶಶಿಕುಮಾರ್ ರೈ, ಇತರರು ಇದ್ದರು.