ಶನಿವಾರಸಂತೆ, ಆ. 25: ಆಲೂರು ಸಿದ್ದಾಪುರದ ಮುಖ್ಯರಸ್ತೆಯಲ್ಲಿ ಬೈಕ್ ಡಿಕ್ಕಿಯಾಗಿ ಓರ್ವನ ಕಾಲಿನ ಮೂಳೆ ಮುರಿಯಲ್ಪಟ್ಟ ಘಟನೆ ನಡೆದಿದ್ದು, ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅರಕಲಗೊಡು ತಾಲೂಕಿನ ತರಗಳಲೆ ಗ್ರಾಮದ ಟಿ.ಟಿ. ಪುಟ್ಟಸ್ವಾಮಿ ಗೌಡ ಎಂಬವರು ತಮ್ಮ ಬೈಕ್‍ನಲ್ಲಿ ಆಲೂರು ಸಿದ್ದಾಪುರ ಗ್ರಾಮದ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದಾಗ ಬೈಕೊಂದು ಡಿಕ್ಕಿಯಾಗಿದೆ. ಡಿಕ್ಕಿ ಪಡಿಸಿದ ಬೈಕ್ ಚಾಲಕ ಪರಾರಿ ಯಾಗಿದ್ದು, ಪುಟ್ಟಸ್ವಾಮಿಯವರ ಕಾಲಿನ ಮೂಳೆ ಮುರಿದಿದೆ.