ಪೊನ್ನಂಪೇಟೆ, ಆ. 25: 2019ನೇ ಸಾಲಿನ ವೀರಾಜಪೇಟೆ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ವನ್ನು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುತ್ತಿದ್ದು, ಕ್ರೀಡಾಕೂಟ ಆಯೋಜನೆಯ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಇಓ ಶ್ರೀಶೈಲ ಬೀಳಗಿ, ಕ್ರೀಡಾಕೂಟಕ್ಕೆ ಸಂಬಂಧಪಟ್ಟ ಹಾಗೆ ಸಮಿತಿಗಳನ್ನು ಮಾಡಿಕೊಂಡು ಕಾರ್ಯ ನಿರ್ವಹಿಸ ಬೇಕು. ದಾನಿಗಳ ಸಹಕಾರವೂ ಕೂಡ ಮುಖ್ಯವಾಗಿದ್ದು, ಅವರ ಸಹಾಯವನ್ನು ಪಡೆದು ಕೊಂಡು, ಸಂಬಂಧಪಟ್ಟ ಎಲ್ಲರೂ ಕ್ರೀಡಾ ಕೂಟದ ಯಶಸ್ವಿಗೆ ಶ್ರಮ ವಹಿಸಬೇಕು ಎಂದರು. ಈ ಸಂದರ್ಭ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಪಿ.ಡಿ. ರತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಶಾಜಿ ಅಚ್ಯುತ್ತನ್, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೆರ ಸುಮಿತ ಗಣೇಶ್, ಪಿಡಿಓ ಪುಟ್ಟರಾಜು, ಸಿಆರ್ಪಿ ತಿರುನೆಲ್ಲಿಮಾಡ ಜೀವನ್, ಬಿಆರ್ಪಿ ಉತ್ತಪ್ಪ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಕಮಾಡ ಚಂಗಪ್ಪ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೆ.ವಿ. ರಾಮಕೃಷ್ಣ, ಮುಖ್ಯ ಶಿಕ್ಷಕರಾದ ಬಿ.ಎಂ. ವಿಜಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ಬಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ವಿ.ಡಿ. ಭಾಗ್ಯ, ಕ್ರೀಡಾ ಸಂಘಟಕ ಟಿ.ಎಸ್. ಮಹೇಶ್, ಸ್ಥಳೀಯ ಸಂಘ-ಸಂಸ್ಥೆಗಳು, ಶಾಲಾ ಶಿಕ್ಷಕರು, ಸ್ಥಳೀಯ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು.
- ಚನ್ನನಾಯಕ