ನಾಪೆÇೀಕ್ಲು, ಆ. 25: ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ವ್ಯಾಟ್ಸ್‍ಪ್‍ಗಳಲ್ಲಿ ಇಲ್ಲ ಸಲ್ಲದ, ಜನರನ್ನು ಬೆಚ್ಚಿಬೀಳಿಸುವ ಸುದ್ದಿಗಳು ಹರಿದಾಡುತ್ತಿವೆ. ಮೊದಲೇ ಭಯದಿಂದ ದಿನ ಕಳೆಯುತ್ತಿರುವ ಜನ ಇದರಿಂದ ಕಂಗಾಲಾಗುತ್ತಿದ್ದಾರೆ. ಅದರಂತೆ ನೆಲಜಿ ದೇವಳದ ಹಿಂಬದಿ ಮಲ್ಮ ಬೆಟ್ಟ ಬಿರುಕು ಬಿಟ್ಟಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಮಲ್ಮ ಬೆಟ್ಟದ ರಸ್ತೆಯಲ್ಲಿ ಮಳೆ ನೀರು ಹರಿದು ಗುಂಡಿಯಾಗಿರುವದು ಬಿಟ್ಟರೆ ಎಲ್ಲಿಯೂ ಬಿರುಕು ಬಿಟ್ಟಿಲ್ಲ ಎಂದು ನೆಲಜಿ ಇಗ್ಗುತ್ತಪ್ಪ ದೇವಳದ ತಕ್ಕಮುಖ್ಯಸ್ಥರು ‘ಶಕ್ತಿ’ಗೆ ತಿಳಿಸಿದ್ದಾರೆ.