ಸುಂಟಿಕೊಪ್ಪ, ಆ. 25: ಡೆಂಗಿ, ಮಲೇರಿಯಾ ರೋಗಗಳ ಬಗ್ಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತರಿಂದ ಜಾಗೃತಿ ಅರಿವು ಕಾಯಕ್ರಮ ಏರ್ಪಡಿಸಲಾಯಿತು.

ಸುಂಟಿಕೊಪ್ಪ ವ್ಯಾಪ್ತಿಯ ಶಾಲಾ ಕಾಲೇಜು ಮತ್ತು ಬಡಾವಣೆಗಳ ಅಂಗನವಾಡಿಗಳಿಗೆ ತೆರಳಿ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಹಾಯಕಿಯರು ಅÀನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ರೋಗ ಹರಡುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕೆ.ಪಿ.ಪ್ರಭಾವತಿ ಆಶಾ ಕಾರ್ಯಕರ್ತೆ ಬಿ.ಜಿ. ಗೀತ, ಟಿ.ಕೆ. ಪ್ರಸಿದ್ಧ ಎಂ. ಗೀತಾ ಹಾಜರಿದ್ದರು.