ಮಡಿಕೇರಿ, ಆ. 24: ಆಲೂರು ಸಿದ್ದಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2019-20ನೇ ಸಾಲಿನ ಪ್ರವೇಶ ಪ್ರಕ್ರಿಯೆಯು ನಡೆಯುತ್ತಿದ್ದು ಎಲೆಕ್ಟ್ರಾನಿಕ್ಸ್ ಮ್ಯಾಕಾನಿಕ್ 6, ಫಿಟ್ಟರ್ 7, ಟ್ಯೂನರ್ 16 ಲಭ್ಯವಿರುವ ಸೀಟುಗಳು. ಎಲೆಕ್ಟ್ರಿಷಿಯನ್ 4, ಎಲೆಕ್ಟ್ರಾನಿಕ್ಸ್ ಮ್ಯಾಕಾನಿಕ್ 4, , ಫಿಟ್ಟರ್ 4, ಟ್ಯೂನರ್ 4 ಮ್ಯಾನೆಜ್‍ಮೇಂಟ್ ಕೋಟಾ ಸೀಟುಗಳು ಖಾಲಿ ಇದು,್ದ ಆಸಕ್ತಿಯುಳ್ಳ ಅಭ್ಯರ್ಥಿಗಳು ತಾ. 27ರ ಒಳಗೆ ಸಂಸ್ಥೆಗೆ ಬಂದು ಪ್ರವೇಶ ಅರ್ಜಿ ಪಡೆದು ಭರ್ತಿ ಮಾಡಿ ನೀಡುವುದು. ಹಾಗೂ ತಾ. 29 ರಿಂದ 31 ರೊಳಗಾಗಿ ಪ್ರವೇಶ ಪಡೆಯುವಂತೆ ಆಲೂರು ಸಿದ್ದಾಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಕೋರಿದ್ದಾರೆ.