ಶನಿವಾರಸಂತೆ, ಆ. 24: ಶನಿವಾರಸಂತೆ ಪಟ್ಟಣದ ನಡುವೆ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆಯ ಮೇಲೆ ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿ ಹತ್ತು ಮಂದಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಜೂಜಾಟಕ್ಕೆ ಬಳಸಿಕೊಂಡಿದ್ದ ಒಂದು ಲಕ್ಷದ ಮೂವತ್ತೆಂಟು ಸಾವಿರದ ನಾಲ್ಕುನೂರು ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರಿಗೆ ಲಭಿಸಿರುವ ಖಚಿತ ಸುಳಿವಿನ ಮೇರೆಗೆ ನಿನ್ನೆ ತಡ ರಾತ್ರಿಯಲ್ಲಿ ಪೊಲೀಸರು ದಾಳಿ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಿ, ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಳ್ಳಿ ರಸ್ತೆಯ ಎಂಎಸ್‍ಐಎಲ್‍ಗೆ ಹೊಂದಿಕೊಂಡಂತಹ ಕಟ್ಟಡದಲ್ಲಿ ‘ಅಂಗವಿಕಲರ ಕ್ಷೇಮಾಭಿವೃದ್ಧಿ ಕ್ಲಬ್’ ಎಂಬ ಹೆಸರಿನಲ್ಲಿ ಡಿ.ಕೆ. ಸುರೇಶ್ ಎಂಬವರು ಜೂಜಾಟ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಅಪರಾಧ ಪತ್ತೆದಳ ಪೊಲೀಸ್ ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, 10 ಜನರನ್ನು ಬಂಧಿಸಿ ಜೂಜಾಟಕ್ಕೆ ಬಳಸಿದ್ದ 1,38,400 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ದಸ್ತಗಿರಿ ಮಾಡಲಾದ 10 ಜನ ಆರೋಪಿಗಳಲ್ಲಿ ಸುರೇಶ್ ಕುಮಾರ್ ಅವರನ್ನು ಹೊರತುಪಡಿಸಿ ಯಾರೂ ಸಹ ಅಂಗವಿಕಲರಾಗಿರುವದಿಲ್ಲ. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.ದಸ್ತಗಿರಿ ವ್ಯಕ್ತಿಗಳ ವಿವರ : ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಆರ್.ಆರ್. ಮನು ರಾಮೇನಹಳ್ಳಿ. ಕೆ.ವಿ. ಸಂತೋಷ್ ಕರ್ಕಳ್ಳಿ, ಬಿ.ಎ. ರಾಜು ಶನಿವಾರಸಂತೆ. ಸಿ.ಜಿ. ಪವನ್ ನಂದಿಗುಂದ, ಸಿ.ಇ. ಪುನಿತ್ ಚಂಗಡಳ್ಳಿ, ಸಿ.ಜಿ. ಪ್ರದೀಪ್ ನಂದಿಗುಂದ, ಬಿ.ಪಿ. ದಿಲೀಪ್ ಬಡುಬನಹಳ್ಳಿ, ಶಿವಣ್ಣ ಶನಿವಾರಸಂತೆ, ಬಿ.ಎನ್. ಶಶಿ ನಂದಿಗುಂದ, ಡಿ.ಕೆ. ಸುರೇಶ್ ಕುಮಾರ್ ಶನಿವಾರಸಂತೆ ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‍ಪೆಕ್ಟರ್ ಎಂ. ಮಹೇಶ್, ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಹಾಗೂ ಸಿಬ್ಬಂದಿಯವರಾದ ಕೆ.ವೈ. ಹಮೀದ್, ಕೆ.ಎಸ್. ಅನಿಲ್‍ಕುಮಾರ್, ವಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್, ಚಾಲಕ ಕೆ.ಎಸ್. ಶಶಿಕುಮಾರ್ ಮತ್ತು ಶನಿವಾರಸಂತೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಬೋಪಣ್ಣ, ಲೋಕೇಶ್, ರಘು ಹಾಗೂ ಮಂಜುನಾಥ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.