ಕೂಡಿಗೆ, ಆ. 24: 9 ತಿಂಗಳಿನ ಮಗುವಿನಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಎ ವಿಟಮಿನ್ ದ್ರಾವಣವನ್ನು ನೀಡುವ ಅಭಿಯಾನವನ್ನು ಹಮ್ಮಿಕೊಂಡಿದೆ.

ಸರ್ಕಾರದ ಹೊಸ ಯೋಜನೆಯಾಗಿರುವದರಿಂದ ಕೂಡಿಗೆಯ ಅಂಗನವಾಡಿ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಚರ್ಮದ ಬೆಳವಣಿಗೆ ಮತ್ತಿತರ ರೀತಿಯ ಆರೋಗ್ಯದ ದೃಷ್ಟಿಯಿಂದ ಎ ವಿಟಮಿನ್ ದ್ರಾವಣವನ್ನು ನೀಡಲಾಯಿತು.

ಈ ಸಂದರ್ಭ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಶಕಿನಾ, ಅಂಗನವಾಡಿ ಕಾರ್ಯಕರ್ತೆ ಕಮರನ್ನಿಸಾ, ಧನಲಕ್ಷ್ಮಿ, ಆಶಾ ಕಾರ್ಯಕರ್ತೆ ಸುನಂದ ಇದ್ದರು.