ವೀರಾಜಪೇಟೆ, ಆ.24: ಮೂಲತಃ ವೀರಾಜಪೇಟೆಯ ನಗರ ನಿವಾಸಿಯಾಗಿರುವ ಸಿದ್ಧಲಿಂಗ ಹಲವು ದಶಕಗಳಿಂದ ಸಮಾಜಸೇವೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿ ರುವ ವ್ಯಕ್ತಿ.
ಗೋಣಿಕೊಪ್ಪದ ಕೀರೆಹೊಳೆ ಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಥವಾ ಕಾಲು ಜಾರಿಬಿದ್ದು ಸಾವನ್ನಪ್ಪಿದ 300ಕ್ಕೂ ಹೆಚ್ಚು ಶವಗಳನ್ನು ಇದೇ ಸಿದ್ಧಲಿಂಗ ನೀರಿಗೆ ಧುಮುಕಿ ನೀರಿನಾಳದಿಂದ ಹೊರ ತಂದು ಸಂಬಂಧಿಕರಿಗೆ ಒಪ್ಪಿಸಿದ್ದಾರೆ.
ಈ ಸಿದ್ಧಲಿಂಗ ಕೇವಲ ಶವವನ್ನು ಮಾತ್ರ ಹೊರಗೆ ತಂದಿದ್ದಾರೆ ಎನ್ನುವ ದರೊಂದಿಗೆ ಸಾವಿನಂಚಿನಲ್ಲಿ ಹೊಳೆ ಪಾಲಾಗುತ್ತಿದ್ದ 11 ಮಂದಿ ಯನ್ನು ರಕ್ಷಿಸಿ ರುವ ವಿಷಯ ನಿಜಕ್ಕೂ ಶ್ಲಾಘನೀಯ.
ಬಡಕೂಲಿ ಕಾರ್ಮಿಕರಾಗಿರುವ ಈ ಸಿದ್ಧಲಿಂಗ ದೈವದತ್ತವಾಗಿ ಒಲಿದಿರುವ ವಿದ್ಯೆ ಈ ಈಜು. ಅವರು ಯಾವದೇ ಅಪೇಕ್ಷೆ ಇಲ್ಲದೆ ತಮ್ಮನ್ನು ತಾವು ದಶಕಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕೇವಲ ತಮ್ಮ ಆತ್ಮತೃಪ್ತಿಗಾಗಿ ಈ ಕೆಲಸದಲ್ಲಿ ನಿರತನಾಗಿರುವ ವ್ಯಕ್ತಿ.
ಇದೀಗ ತೋರ ಗ್ರಾಮದ ದುರಂತ ಸಂಭವಿಸಿದ ಸ್ಥಳದಲ್ಲಿ ಕಾಣೆಯಾದವರ ಪತ್ತೆಯಲ್ಲಿ ಸದ್ದಿಲ್ಲದೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಲ್ಲವೇ ನಿಜವಾದ ಸಾಧಕ ಹಾಗೂ ಸಮಾಜ ಸೇವಕ. ಇವರಂತಹ ನಿಜವಾದ ಸೇವಕರನ್ನು ಗುರುತಿಸುವದು ಧರ್ಮ.
ಈ ರೀತಿ ಎಲೆಮರೆಯ ಕಾಯಿ ಯಂತೆ ಸಮಾಜದಲ್ಲಿ ಅನೇಕರು ಸಿದ್ಧಲಿಂಗ ಅವರ ಸಾಲಿನಲ್ಲಿ ನಿಲ್ಲುವವರಿದ್ದಾರೆ. ಇಂತಹವರೇ ಆಪತ್ಕಾಲದ ಬಂಧುಗಳು... ನೊಂದವರಿಗೆ ಪ್ರತ್ಯಕ್ಷ ದೇವರಂತೆ!
-ರಂಜಿತಾ