ಮಡಿಕೇರಿ, ಆ. 24: ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಿ.ಪಿ.ಸಿ/ಎ.ಪಿ.ಸಿ. ಮತ್ತು ಮಹಿಳಾ ಪಿ.ಸಿ. ಹುದ್ದೆಯ ಪ್ರಥಮ ತಾತ್ಕಾಲಿಕ ಆಯ್ಕೆ ಪಟ್ಟಿಯು ತಾ. 19 ರಂದು ಕೊಡಗು ಜಿಲ್ಲಾ ಪೊಲೀಸ್ ನೇಮಕಾತಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳ ಗಮನಕ್ಕಾಗಿ ಜಿಲ್ಲಾ ಪೊಲೀಸ್ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಮೂಲ ದಾಖಲಾತಿ ಪರಿಶೀಲನೆಗಾಗಿ ದಿನ ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳಿಗೆ ಅಂಚೆ ಮೂಲಕ ಪತ್ರವನ್ನು ಕಳುಹಿಸ ಲಾಗಿದ್ದು, ನಿಗದಿತ ಸೆಪ್ಟೆಂಬರ್, 3, 4 ಮತ್ತು 5 ರಂದು ತಪ್ಪದೆ ವೈದ್ಯಕೀಯ ಪರೀಕ್ಷೆ ಮತ್ತು ಮೂಲ ದಾಖಲಾತಿ ಪರಿಶೀಲನೆಗಾಗಿ ಹಾಜರಾಗುವಂತೆ ಪೊಲೀಸ್ ನೇಮಕಾತಿ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ತಿಳಿಸಿದ್ದಾರೆ.