ಮಡಿಕೇರಿ, ಆ. 24: ಮಡಿಕೇರಿ ಶಾಖೆಯ ಬ್ರಹ್ಮಾಕುಮಾರೀಸ್ ಸಂಸ್ಥೆಯಿಂದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಅಧೀಕ್ಷಕರು, ಸಿಬ್ಬಂದಿಗಳಿಗೆ ಹಾಗೂ ಕೈದಿಗಳಿಗೆ ಈಶ್ವರೀಯ ಸಂದೇಶ ನೀಡಿ ರಕ್ಷಾ ಬಂಧನದ ಮಹತ್ವವನ್ನು ತಿಳಿಸಿಲಾಯಿತು. ಎಲ್ಲರಿಗೂ ಸಂಸ್ಥೆಯ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯತ್ರಿಜೀ ಅವರು ರಾಖಿ ಕಟ್ಟಿದರು. ನಂತರ ಪ್ರಸಾದ ವಿತರಿಸಲಾಯಿತು.