ಗೋಣಿಕೊಪ್ಪ ವರದಿ, ಆ. 24: ಇಲ್ಲಿನ ಕಾವೇರಿ ಮಹಿಳಾ ಸಮಾಜ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಛಾಯಾಗ್ರಾಹಕರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಮೈಕಲ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಅಭಿವೃಧ್ಧಿ ಬಗ್ಗೆ ಚರ್ಚಿಸಲಾಯಿತು.

ಈ ಸಂದÀರ್ಭ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಅಧ್ಯಕ್ಷರಾಗಿ ಡಿ.ಸಿ. ರವೀಂದ್ರ, ಉಪಾಧ್ಯಕ್ಷರಾಗಿ ಪಿ. ಶರತ್, ಕಾರ್ಯದರ್ಶಿಯಾಗಿ ರಾಮ್‍ದಾಸ್, ಖಜಾಂಚಿಯಾಗಿ ಶೈಲೇಂದ್ರ, ಜಂಟಿ ಕಾರ್ಯದರ್ಶಿಯಾಗಿ ಹರ್ಷಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರಿಜೇಶ್, ಅರುಣ್, ಶಿವ, ನಿರ್ದೇಶಕರಾಗಿ ಅಚ್ಚು, ಮದು, ಜಾನ್, ಸುದೀರ್, ಸಲಹಾ ಸಮಿತಿ ಸದಸ್ಯರಾಗಿ ಮೂಕಳೇರ ಲಕ್ಷ್ಮಣ್, ಎಸ್.ಎಲ್. ಶಿವಣ್ಣ ಅವರನ್ನು ಆಯ್ಕೆ ಮಾಡಲಾಯಿತು.

-ಸುದ್ದಿಪುತ್ರ