ಸೋಮವಾರಪೇಟೆ, ಆ. 24: ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟ ಸಮೀಪದ ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನ ದಲ್ಲಿ ನಡೆಯಿತು. ಕಬಡ್ಡಿ ಪಂದ್ಯಾಟದ ಬಾಲಕರ ವಿಭಾಗದಲ್ಲಿ ವಿಶ್ವಮಾನವ ಕುವೆಂಪು ಶಾಲೆ ಪ್ರಥಮ, ಎಸ್.ಜೆ.ಎಂ.ಶಾಲೆ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಆಲೂರು-ಸಿದ್ದಾಪುರದ ಮೊರಾರ್ಜಿ ಶಾಲೆ ಪ್ರಥಮ, ಸಾಂದೀಪನಿ ಶಾಲೆ ದ್ವಿತೀಯ ಸ್ಥಾನಗಳಿಸಿತು. ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಜಿ.ಎಂ.ಪಿ. ಆಲೂರು-ಸಿದ್ದಾಪುರ ಪ್ರಥಮ, ಸಾಂದೀಪನಿ ದ್ವಿತೀಯ ಸ್ಥಾನ ಗಳಿಸಿತು. ಬಾಲಕಿಯರ ವಿಭಾಗದ ಥ್ರೋಬಾಲ್ ನಲ್ಲಿ ಜಿ.ಎಂ.ಪಿ. ನೇರುಗಳಲೆ ಪ್ರಥಮ, ಸಾಂದೀಪನಿ ದ್ವಿತೀಯ ಸ್ಥಾನಗಳಿಸಿದವು.

ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಎನ್.ಎಂ.ನಾಗೇಶ್, ಎನ್.ಎನ್.ಶಿವಣ್ಣ, ವಸಂತ ಕುಮಾರಿ, ಇಂದಿರಾ, ಮಂಜುಳಾ, ಧರ್ಮಪ್ಪ, ಅಲೋಕ್ ಕಾರ್ಯನಿರ್ವಹಿಸಿದರು. ಕ್ರೀಡಾಕೂಟದ ಮೇಲುಸ್ತುವಾರಿಯನ್ನು ಕುವೆಂಪು ಶಾಲೆಯ ಮುಖ್ಯ ಶಿಕ್ಷಕಿ ಮಿಲ್‍ಡ್ರೆಡ್ ಗೊನ್ಸಾಲ್ವೆಸ್, ಬಿ.ಜಿ.ಎಸ್. ಶಾಲೆಯ ಮುಖ್ಯಸ್ಥ ಗಣೇಶ್ ವಹಿಸಿದ್ದರು.