ವೀರಾಜಪೇಟೆ, ಆ. 23: ಹಬ್ಬ ಹರಿದಿನಗಳು ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಒಗ್ಗಟ್ಟು ಮೂಡಿಸುವ ಸಂಭ್ರಮದ ಸಂಕೇತವಾಗÀಬೇಕು ಎಂದು ತಹಶೀಲ್ದಾರ್ ಪುರಂದರ ಹೇಳಿದರು.
ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ಗಣೇಶ ನಾಡ ಹಬ್ಬದ ಸಮಿತಿಯಿಂದ ಹಮ್ಮಿಕೊಂಡಿದ್ದ ಗೌರಿ ಗಣೇಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪುರಂದರ ಅವರು, ವೀರಾಜಪೇಟೆ ಪಟ್ಟಣದಲ್ಲಿ 11 ದಿನಗಳ ಕಾಲ ಆಚರಿಸುª ಇತಿಹಾಸ ಪ್ರಸಿದ್ಧÀ ಗೌರಿ ಗಣೇಶ ಉತ್ಸವದಲ್ಲಿ 20 ಮಂಟಪಗಳು ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮಂಟಪಗಳಿಗೆ ಸಿ.ಸಿ ಕ್ಯಾಮರಾವನ್ನು ಅಳವಡಿಸದರೆ ಮುಂದಕ್ಕೆ ಆಗುವ ಅನಾಹುತವನ್ನು ತಪ್ಪಿಸಬಹುದಾಗಿದೆ. ತಾಲೂಕಿನಲ್ಲಿ ಪ್ರಕೃತಿ ವಿಕೋಪ ಉಂಟಾದ ಹಿನೆÀ್ನಲೆಯಲ್ಲಿ ಈ ಬಾರಿ ಆದಷ್ಟು ಸಾರ್ವಜನಿಕರಿಗೆ ಹೊರೆಯಾಗದೆ ಸರಳ ರೀತಿಯಲ್ಲಿ ಉತ್ಸವವನ್ನು ಆಚರಿಸುವಂತೆ ಹೇಳಿದರು.
ಡಿವ್ಯೆಎಸ್ಪಿ ವಿಜಯಕುಮಾರ್ ಮಾತನಾಡಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇಲಾಖೆ ಕೆಲವು ನಿರ್ಬಂಧಗಳನ್ನು ಹಾಕಲಾಗುತ್ತದೆ. ಎಲ್ಲರೂ ಸಹಕರಿಸಬೇಕು. ಅನಂತಪದ್ಮನಾಭ ವೃತದ ದಿನದಂದÀು ನಡೆಯುವ ಸಾಮೂಹಿಕ ಗೌರಿ ಗಣೇಶನ ವಿಸರ್ಜನದ ಮೆರವಣಿಗೆಯಲ್ಲಿ ಹೆಚ್ಚಿನ ಶಬ್ಧ ಮಾಡುವ ಡಿ.ಜೆಗಳನ್ನು ಬಳಸುವಂತಿಲ್ಲ. ಗೌರಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ರಾತ್ರಿ ವೇಳೆ ಉತ್ಸವ ಸಮಿತಿಗೆ ಸಂಬಂಧಿಸಿದವರು ಕಾವಲಿರಬೇಕು. ಸಾಮೂಹಿಕ ವಿಸರ್ಜನೋತ್ಸವದ ಮೆರವಣಿಗೆಯಲ್ಲಿ ಮಂಟಪಗಳು ಹಿಂದಿನ ಸಾಲಿನಂತೆ ನಿರ್ದಿಷ್ಟ ಸರದಿ ಆಧಾರದ ಮೇಲೆ ಮುಂದುವರೆಯಬೇಕು. ಸರದಿ ಸಾಲಿಗೆ ಮುಂಚಿತವಾಗಿ ಬಂದ ಮಂಟಪಗಳು ಡೊಡ್ಡಟ್ಟಿ ಚೌಕಿ ಬಳಿ ಕಾದು ಸರದಿಯನ್ನು ಕಾಪಾಡಬೇಕು. ಗೌರಿಗಣೇಶೋತ್ಸವ ಸಂಭ್ರಮ ಶಾಂತಿ ಸುವ್ಯವಸ್ಥೆಯಿಂದ ಆಚರಿಸಲು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವದು ಎಂದರು.
ಚೆಸ್ಕಾಂ ಸಹಾಯಕ ಅಭಿಯಂತರ ಸುರೇಶ್ ಮಾತನಾಡಿ ಪಟ್ಟಣದಲ್ಲಿ ಅನೇಕ ಟ್ರಾನ್ಸ್ಫಾರ್ಮ್ರ್ಗಳು ಕೆಟ್ಟಿದ್ದು ದುರಸ್ತಿಪಡಿಸಲಾಗಿದೆ. ಇಲ್ಲಿನ ಶಾಂತಿ ನಗರದಲ್ಲಿರುವ ಟ್ರಾನ್ಸ್ಫಾರ್ಮ್ರ್ ಕೆಟ್ಟಿದ್ದು ಒಂದು ವಾರದಲ್ಲಿ ಸರಿಪಡಿಸಲಾಗುವದು. ಮುಖ್ಯ ರಸ್ತೆಯಲ್ಲಿ ಮಂಟಪಗಳು ತೆರಳಲು ತೊಂದರೆ ಆಗುತ್ತಿದ್ದ ವಿದ್ಯುತ್ ಕಂಬಗಳನ್ನು ಪಕ್ಕಕ್ಕೆ ಸರಿಸಲಾಗಿದೆ. ಉತ್ಸವ ಆಚರಣೆಗೆ ತಾತ್ಕಾಲಿಕ ವಿದ್ಯುಚ್ಚಕ್ತಿಗೆ ಅನುಮತಿಯನ್ನು ತಕ್ಷಣದಿಂದ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ 20 ಮಂಟಪಗಳ ಪದಾಧಿಕಾರಿಗಳು, ಆರೋಗ್ಯ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ಗಣೇಶ ನಾಡ ಹಬ್ಬದ ಅಧ್ಯಕ್ಷ ಸಾಯಿನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಎಸ್ಐ ಗಳಾದ ಸಂತೋಷ್ ಕಶ್ಯಪ್, ವೀಣಾ ನಾಯಕ್, ರೆವಿನ್ಯೂ ಅಧಿಕಾರಿ ಪಳಂಗಪ್ಪ, ಹೇಮಂತ್, ಪಟ್ಟಣ ಪಂಚಾಯಿತಿ ಸದಸ್ಯ ಹರ್ಷವರ್ಧನ್ ಮತ್ತಿತರರು ಉಪಸ್ಥಿತರಿದ್ದರು.