ವೀರಾಜಪೇಟೆ, ಆ. 23: ವೀರಾಜಪೇಟೆ ತೋರ ಗ್ರಾಮದಲ್ಲಿ ಭೂಕುಸಿತದಲ್ಲಿ ಗಾಯಗೊಂಡಿದ್ದ ಕೆ.ಅರ್. ಸತೀಶ್ ಅವರನ್ನು ಗ್ರಾ.ಪಂ. ಸದಸ್ಯರು ಭೇಟಿ ಮಾಡಿ ಸಾಂತ್ವನ ಹೇಳಿದರು.
ವೀರಾಜಪೇಟೆ ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರ ಕೊರ್ತಿ ಕಾಡು ನಿವಾಸಿ ಕೆ.ಅರ್ ರಾಜು ದ್ವಿತೀಯ ಪುತ್ರ ಕೆ.ಅರ್. ಸತೀಶ್ (20) ಎಡಗಾಲುವಿಗೆ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಣ್ಣಿನಡಿಯಲ್ಲಿ ಸಿಲುಕಿಕೊಂಡ ಸತೀಶ್ ಪವಾಡ ಸದೃಶವಾಗಿ ಪಾರಾಗಿದ್ದಾರೆ. ತೀವ್ರ ರೀತಿಯಲ್ಲಿ ಗಾಯಗೊಂಡಿದ್ದ ಸತೀಶ್ ವೀರಾಜಪೇಟೆ ಸರ್ಕಾರಿ ಅಸ್ಪತ್ರೆಯಲ್ಲಿ ದಾಖಲಾಗಿದ್ದು, ಗಾಯಳುವನ್ನು ಗ್ರಾಮ ಪಂಚಾಯಿತಿಯ ಸದಸ್ಯರು ಭೇಟಿ ಮಾಡಿ ಚಿಕಿತ್ಸೆಗಾಗಿ ಸಹಾಯ ಧನ ಮತ್ತು ಸರ್ಕಾರದಿಂದ ಲಭಿಸುವ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆ ನೀಡಿದರು.
ಕಂದಾಯ ಇಲಾಖೆಯ ಅಧಿಕಾರಿ ಪಳಂಗಪ್ಪ ಅವರು ಅಗಮಿಸಿ ಗಾಯಾಳು ಸತೀಶ್ ಮತ್ತು ವೈದÀ್ಯರಿಂದ ಮಾಹಿತಿ ಪಡೆದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್ವರ್ ,ಕಿರಣ್ಕುಮಾರ್, ಮತ್ತು ರಾಧ ಗಣಪತಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಅವರು ಹಾಜರಿದ್ದರು.
-ಕೆ.ಕೆ.ಎಸ್. ವೀರಾಜಪೇಟೆ