ಗೋಣಿಕೊಪ್ಪ ವರದಿ, ಆ. 23: ಪಾಲಿಬೆಟ್ಟದಲ್ಲಿ ಅಮಾನವೀಯವಾಗಿ ಗೋಹತ್ಯೆ ಮಾಡಿದವರನ್ನು ಕೊಡಗು ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಬಿಜೆಪಿ ಅಲ್ಪಸಂಖ್ಯಾತ ರಾಜ್ಯ ಸಮಿತಿಯ ಮಾಜಿ ಸದಸ್ಯ ಪಿ.ಕೆ. ಮೊಹಮ್ಮದ್ ಚೆರ್ದು ಒತ್ತಾಯಿಸಿದ್ದಾರೆ.
ಹೇಳಿಕೆಯಲ್ಲಿ ನೀಡಿರುವ ಇವರು, ಇಂತಹ ಹೀನಕೃತ್ಯ ಮುಸ್ಲಿಂ ಸಮುದಾಯ ತಲೆ ತಗ್ಗಿಸುವಂತೆ ಮಾಡಿದ್ದು, ನಮಗೂ ಜಿಲ್ಲೆಯಲ್ಲಿ ಬದುಕು ಸಾಗಿಸಲು ತೊಂದರೆ ಯಾಗಲಿದೆ. ಇಂತಹ ಕೃತ್ಯ ಎಸಗಿದ ವರನ್ನು ಜಿಲ್ಲೆಯಿಂದ ಗಡೀಪಾರು ಮಾಡುವದು ಸೂಕ್ತ. ಇನ್ನೂ ಸಾಕಷ್ಟು ಜನರು ಜಿಲ್ಲೆಯಲ್ಲಿ ಉಳಿದು ಕೊಂಡಿರುವದನ್ನು ಪತ್ತೆ ಹಚ್ಚಿ ಅವರನ್ನು ಕೂಡ ಜಿಲ್ಲೆಯಿಂದ ಹೊರಗಿಡುವದು ಕೊಡಗು ರಕ್ಷಣೆ ವಿಚಾರದಲ್ಲಿ ಉತ್ತಮ ನಿರ್ಧಾರವಾಗಲಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತ ರಾಗುವಂತೆ ಒತ್ತಾಯಿಸಿದ್ದಾರೆ.