ಗೋಣಿಕೊಪ್ಪ ವರದಿ. ಆ. 23 : ಸ್ಥಳೀಯ ಪೊಲೀಸ್ ಉಪ ನಿರೀಕ್ಷಕ ಶ್ರೀಧರ್ ಅವರ ಕರ್ತವ್ಯಕ್ಕೆ ಅಡ್ಡಿ ಹಾಗೂ ಕೊಲೆ ಬೆದರಿಕೆ ಮಾಡಿದ ಆರೋಪದಡೀ ಪೊನ್ನಂಪೇಟೆಯ ನೂರೇರ ವಿನು (30) ಎಂಬವರ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಹಲ್ಲೆಗೆ ಯತ್ನ, ಕೊಲೆ ಬೆದರಿಕೆ ಆರೋಪದಡಿ 353, 332, 504 ಹಾಗೂ 506 ಸೆಕ್ಷನ್‍ನಡಿ ಮೊಕದ್ದಮೆ ದಾಖಲಿಸಿ ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರಿ ಪಡಿಸಲಾಯಿತು. ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನದ ಆದೇಶ ನೀಡಲಾಗಿದೆ.

ಗುರುವಾರ ಗೋಣಿಕೊಪ್ಪ ಪಟ್ಟಣದಲ್ಲಿ ‘ನೋ ಪಾರ್ಕಿಗ್’ ಜಾಗದಲ್ಲಿ ಕಾರು ನಿಲ್ಲಿಸುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಚಕಮಕಿ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತಕ್ಷಣ ವಿನು ಅವರನ್ನು ಬಂಧಿಸಲಾಗಿತ್ತು.