ನಾಪೆÇೀಕ್ಲು, ಆ. 23: ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಬಲಿಕಲ್ಲು ಮತ್ತು ಮುಖ ಮಂಟಪದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಆ. 27ರಂದು ನಡೆಯಬೇಕಿದ್ದ ಸಿಂಹ ಮಾಸ (ಚಿಂಙರ್ 10) ಆರಾಧನೆಯನ್ನು ಮುಂದೂಡಲಾಗಿದೆ. ಆ ದಿನ ದೇವಳದಲ್ಲಿ ಮಹಾ ಪೂಜೆ ಮಾತ್ರ ನಡೆಯಲಿದೆ. ಈ ಉತ್ಸವವನ್ನು ತುಲಾ ಮಾಸ 10 ರಂದು ನಡೆಸಲಾಗುವದು ಎಂದು ದೇವಳದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.