ಸೋಮವಾರಪೇಟೆ, ಆ. 23: ಇಲ್ಲಿನ ಸಂತ ಜೋಸೆಫರ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ಇಕೋ ಕ್ಲಬ್ ವತಿಯಿಂದ ಪ್ರವಾಹದಿಂದ ಹಾನಿಯಾದ ಮನೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಸಿದ್ದಾಪುರ ಸಮೀಪದ ಬೆಟ್ಟದಕಾಡು ಗ್ರಾಮದಲ್ಲಿ ಮಳೆಯಿಂದ ಇತ್ತೀಚೆಗೆ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಹೆಚ್ಚಿನ ಮನೆಗಳಿಗೆ ಹಾನಿಯಾಗಿತ್ತು. ಅಲ್ಲಿಗೆ ತೆರಳಿದ ವಿದ್ಯಾರ್ಥಿಗಳು ಸ್ವಚ್ಫತಾ ಕೆಲಸ ನಿರ್ವಹಿಸಿದರು. ಕಾಲೇಜಿನ ಸಂಚಾಲಕರಾದ ಧರ್ಮಗುರು ರಾಯಪ್ಪ, ಪ್ರಾಂಶುಪಾಲರಾದ ಅಂತೋಣಿಸ್ವಾಮಿ, ಯೋಜನಾಧಿಕಾರಿ ಆನಂದ್ ಶ್ರಮದಾನದ ನೇತೃತ್ವ ವಹಿಸಿದ್ದರು.