ಮಡಿಕೇರಿ, ಆ. 23: ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಇವರ ಆಶ್ರಯದಲ್ಲಿ ತಾ. 25 ರಂದು ಬೆಳಗ್ಗೆ 8.30 ಗಂಟೆಯಿಂದ ಜಾಲಹಳ್ಳಿಯ ಎಚ್‍ಎಂಟಿ ಕ್ರೀಡಾಂಗಣದಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ.

ಸೆಪ್ಟೆಂಬರ್ 8 ರಂದು ಬೆಳಗ್ಗೆ 8.30 ಗಂಟೆಗೆ ಲಗ್ಗೆರೆ ನಮ್ಮನೆ ಸಾಂಸ್ಕøತಿಕ ಕಲಾ ಕೇಂದ್ರದಲ್ಲಿ ಸಾಂಸ್ಕøತಿಕ ಸ್ಪರ್ಧೆಗಳು, 22 ರಂದು ಬೆಳಗ್ಗೆ 9 ಗಂಟೆಗೆ ಶಟ್ಲ್ ಬ್ಯಾಂಡ್ಮಿಂಟ್(ಅಕೊಲೇಡ್ಸ್ ಬ್ಯಾಡ್ಮಿಂಟನ್ ಮತ್ತು ಸ್ಪೋಟ್ರ್ಸ್ ಅಕಾಡೆಮಿ), 29 ರಂದು ಬೆಳಗ್ಗೆ 9.30 ಗಂಟೆಗೆ ಲಗ್ಗೆರೆ ನಮ್ಮನೆ ಸಾಂಸ್ಕøತಿಕ ಕಲಾ ಕೇಂದ್ರದಲ್ಲಿ ವಾರ್ಷಿಕ ಮಹಾಸಭೆ, ಅಕ್ಟೋಬರ್, 13 ರಂದು ಬೆಳಗ್ಗೆ 9.30 ಗಂಟೆಗೆ ಲಗ್ಗೆರೆ ನಮ್ಮನೆ ಸಾಂಸ್ಕøತಿಕ ಕಲಾ ಕೇಂದ್ರದಲ್ಲಿ ಸ್ನೇಹ ಮಿಲನ ಹಾಗೂ ಡಿಸೆಂಬರ್ 8 ರಂದು ಬೆಳಗ್ಗೆ 10 ಗಂಟೆಗೆ ಲಗ್ಗೆರೆ ನಮ್ಮನೆ ಸಾಂಸ್ಕøತಿಕ ಕಲಾ ಕೇಂದ್ರದಲ್ಲಿ ಭಾವೀ ವಧೂ-ವರರ ಮುಖಾ-ಮುಖಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ದೂ.ಸಂ: 080-23433014, ಮೊ.9483742983 ನ್ನು ಹಾಗೂ ಇ-ಮೇಲ್: ಞಜಞgoತಿಜಚಿsಚಿmಚಿರಿಚಿ@gmಚಿiಟ.ಛಿom ವೆಬ್‍ಸೈಟ್: ತಿತಿತಿ.ಞಜಞgoತಿಜಚಿsಚಿmಚಿರಿಚಿ.ಛಿom ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.