ಸೋಮವಾರಪೇಟೆ, ಆ. 21: ಇಲ್ಲಿನ ಒಕ್ಕಲಿಗರ ಸಂಘದ ಚಾಣಕ್ಯ ಕಾಲೇಜಿನಲ್ಲಿ ಸ್ಪಂದನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಸದ್ಭಾವನಾ ದಿನಾಚರಣೆಯನ್ನು ಆಚರಿಸ ಲಾಯಿತು. ತಾ. 20 ರಂದು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರ ಜನ್ಮ ದಿನವನ್ನು ರಾಷ್ಟ್ರಾದ್ಯಂತ ಸದ್ಭಾವನಾ ದಿನವನ್ನಾಗಿ ಆಚರಿಸಲಾಗ ುತ್ತಿವೆ ಎಂದು ಕಾಲೇಜಿನ ಪ್ರಾಂಶುಪಾಲ ರಾದ ಹೆಚ್.ಬಿ. ಬೆಳ್ಳಿಯಪ್ಪ ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸದ್ಭಾವನಾ ಪ್ರತಿಜ್ಞೆ ಸ್ವೀಕರಿಸಿದರು. ಕನ್ನಡ ಉಪನ್ಯಾಸಕ ಎಸ್. ಕುಮಾರ್, ಉಪನ್ಯಾಸಕಿ ಭವ್ಯ ಮತ್ತಿತರು ಉಪಸ್ಥಿತರಿದ್ದರು.