ಮಡಿಕೇರಿ, ಆ. 21: ಕೊಡಗು ಮೂಲದ ಅಂಕಣಕಾರ ಸಂತೋಷ್ ತಮ್ಮಯ್ಯ ಬರೆದಿರುವ ‘ಸಮರ ಭೈರವಿ’ ಪುಸ್ತಕ ತಾ. 24 ರಂದು ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.
ಬಿ.ಜೆ.ಪಿ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ಜ. ವಿ.ಕೆ. ಸಿಂಗ್, ಸುವರ್ಣ ನ್ಯೂಸ್ ಚಾನೆಲ್ನ ಅಜಿತ್ ಹನಮಕ್ಕನವರ್, ಮಾಜಿ ಐ.ಪಿ.ಎಸ್. ಅಣ್ಣಾಮಲೈ, ಲೆ. ಕರ್ನಲ್ ಪಿ.ಎಸ್. ಗಣಪತಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ತಾ. 28 ರಂದು ಪ್ರಜ್ಞಾಕಾವೇರಿ ಹಾಗೂ ಅಖಿಲ ಭಾರತ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಸಂಜೆ 5 ಗಂಟೆಗೆ ಜಿಲ್ಲಾಕೇಂದ್ರ ಮಡಿಕೇರಿಯ ಕೊಡವ ಸಮಾಜದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ‘ಸಮರ ಭೈರವಿ’ ಪುಸ್ತಕ ಬಿಡುಗಡೆಗೊಳ್ಳಲಿದೆ.