ಮಡಿಕೇರಿ, ಆ. 22: ಇಲ್ಲಿನ ಸಮೀಪದ ಕಾಟಕೇರಿ ಕೂರನಬಾಣೆಯ ಶ್ರೀ ಶಕ್ತಿ ಸಂಘ ಧರ್ಮಸ್ಥಳ ಸಂಘ ಸ್ವಸಹಾಯ ಸಂಘÀ ಹಾಗೂ ಸ್ವಯಂ ಸೇವ ಯುವಕ ಸಂಘ ಗ್ರಾಮಸ್ಥರು ಸಂತ್ರಸ್ತರಿಗೆ ಪರಿಹಾರ ವಿತರಿಸಿದರು.

ಸುಮಾರು 10 ಸಾವಿರದಷ್ಟು ಹಣ ಸಂಗ್ರಹಿಸಿ ಮಹಾ ಮಳೆಗೆ ಪ್ರವಾಹಕ್ಕೆ ಸಿಲುಕಿದ್ದ ಕಣ್ಣ ಬಲಮುರಿಯ ಮಾರಿಯಮ್ಮ ದೇವಾಲಯದ ಸಮುದಾಯದ ಭವನದಲ್ಲಿ ಸುಮಾರು 150 ಜನ ನೆರೆ ಸಂತ್ರಸ್ತರಿಗೆ ಬೇಕಾಗುವ ಸಾಮಗ್ರಿಗಳನ್ನು ನೀಡಿದರು. ಇದೇ ಸಂದರ್ಭ ಸಂಘದ ಸದಸ್ಯರಾದ ಬಿ.ಸಿ. ಗಿರಿಜ ಮಾತನಾಡಿ, ಹಲವಾರು ಜನ ಸಂಕಷ್ಟಕ್ಕೆ ಸಿಲುಕಿದ್ದು, ನಮ್ಮ ಗ್ರಾಮದ ಸಂಘ-ಸಂಸ್ಥೆಗಳು ಸೇರಿ ಸಾಮಗ್ರಿಗಳನ್ನು ನೇರೆ ಸಂತ್ರಸ್ತರಿಗೆ ನೀಡಿರುವದಾಗಿ ಹೇಳಿದರು.ಗೋಣಿಕೊಪ್ಪಲು: ಈ ಬಾರಿ ಸುರಿದ ಭಾರೀ ಮಳೆಗೆ ನೆರೆ ಹಾವಳಿಯಲ್ಲಿ ಸಿಲುಕಿಕೊಂಡು ಗೋಣಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಗೋಣಿಕೊಪ್ಪಲುವಿನ 8 ವಾರ್ಡ್‍ಗಳ ಆಯ್ದ ಫಲಾನುಭವಿಗಳಿಗೆ ಜಿಲ್ಲಾಡಳಿತದ ವತಿಯಿಂದ ತಲಾ 10 ಸಾವಿರದಂತೆ 89 ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಲಾಯಿತು.

ಗೋಣಿಕೊಪ್ಪಲುವಿನ ಪರಿಹಾರ ಕೇಂದ್ರದಲ್ಲಿ ಚೆಕ್ ವಿತರಿಸಿದ ತಾಲೂಕು ಪಂಚಾಯಿತಿ ಸದಸ್ಯ ಜಯ ಪೂವಯ್ಯ ಸರ್ಕಾರ ಸದಾ ನೊಂದವರ ಪರವಿದ್ದು ಈ ಬಾರಿಯ ನೆರೆ ಹಾವಳಿಯಲ್ಲಿ ಸಂಕಷ್ಟಕ್ಕೀಡಾದ ನೆರೆ ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದೆ. ಪರಿಹಾರವನ್ನು ಸರಿಯಾಗಿ ಬಳಕೆಮಾಡಿಕೊಳ್ಳುವಂತೆ ತಿಳಿಸಿದರು. ಪರಿಹಾರ ಕೇಂದ್ರದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ ಅಧಿಕಾರಿಗಳ ಕಾರ್ಯ ಸಾಧನೆಯನ್ನು ಶ್ಲಾಘಿಸಿದರು.

ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಮಹಿಳಾ ಮತ್ತು ಮಕ್ಕಳ ತಾಲೂಕು ಮಟ್ಟದ ಅಧಿಕಾರಿ ಸೀತಾಲಕ್ಷ್ಮಿ ಕಂದಾಯ ಇಲಾಖೆಯ ಅಧಿಕಾರಿಗಳಾದ ಮಂಜುನಾಥ್, ಯಶ್ವಂತ್, ಸುನೀಲ್, ಸರೋಜ, ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳ, ಮಂಜುರೈ, ಮುಂತಾದವರು ಹಾಜರಿದ್ದರು.ಮಡಿಕೇರಿ: ಸೋಮವಾರಪೇಟೆ ತಾಲೂಕು ಬಲಿಜ ಸಂಘದ ವತಿಯಿಂದ ಕುಶಾಲನಗರದಲಿ ನೆರೆಸಂತ್ರಸ್ತ ಬಲಿಜ ಸಮುದಾಯದವರಿಗೆ ಪರಿಹಾರ ಧನವನ್ನು ವಿತರಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಟಿ.ಡಿ. ದಯಾನಂದ, ಉಪಾಧ್ಯಕ್ಷ ಮದನ್, ಖಜಾಂಚಿ ಟಿ.ಬಿ. ಸತೀಶ್, ಗೌರವಾಧ್ಯಕ್ಷ ಟಿ.ಎಸ್. ಬಾಲಕೃಷ್ಣ, ಟಿ.ಎನ್. ಜಯರಾಂ ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.ಗೋಣಿಕೊಪ್ಪ ವರದಿ: ಮಳೆಯಿಂದ ನಷ್ಟ ಅನುಭವಿಸಿದ ಕುರ್ಚಿ, ಶ್ರೀಮಂಗಲ ಹಾಗೂ ಕಾಕೂರು ಗ್ರಾಮದ ಸಂತ್ರಸ್ತರಿಗೆ ಶ್ರೀಮಂಗಲ ಗ್ರಾಮ ಪಂಚಾಯಿತಿ ವತಿಯಿಂದ ಪರಿಹಾರ ಕಿಟ್ ವಿತರಿಸಲಾಯಿತು.

ಸುಮಾರು 100 ಜನ ಸಂತ್ರಸ್ತರು ಸವಲತ್ತು ಪಡೆದುಕೊಂಡರು. ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ತಿಮ್ಮಯ್ಯ, ಸದಸ್ಯರುಗಳಾದ ಅಜ್ಜಮಾಡ ಜಯ, ಚೋನೀರ ಕಾಳಯ್ಯ, ಚಂದ್ರ ಹಾಗೂ ಕಾಳಿಮಾಡ ತಮ್ಮು ಮುತ್ತಣ್ಣ ಇದ್ದರು.