ಗೋಣಿಕೊಪ್ಪ ವರದಿ, ಆ. 22: ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಮಾನಿಲ್ ಅಯ್ಯಪ್ಪ ಯುವಕ ಸಂಘ ಹಾಗೂ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಹಯೋಗದಲ್ಲಿ ಮಾಯಮುಡಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ ಮತ್ತು ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಮನೆ, ಮನೆಗಳ ಮುಖ್ಯದ್ವಾರದಲ್ಲಿ ಬಾವುಟ ಕಟ್ಟಿ ಸ್ವಾತಂತ್ರ್ಯೋತ್ಸವ ನಡೆಸಲಾಯಿತು.

ಚೆನ್ನಂಗೊಲ್ಲಿಯಿಂದ ಮಾಯಮುಡಿಯ ಮುಖ್ಯ ರಸ್ತೆಯ ಬದಿಗಳಲ್ಲಿರುವ ಕಾಡು ಕಡಿದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಗ್ರಾಮದ ಯುವಕರು ಪಾಲ್ಗೊಂಡು ಕಸ, ಪ್ಲಾಸ್ಟಿಕ್ ಹೆಕ್ಕಿದರು. ಹಿರಿಯ ಕಾಫಿ ಬೆಳೆಗಾರರಾದ ಕೊಡಂದೇರ ಎಂ. ತಿಮ್ಮಯ್ಯ, ಕಾಳಪಂಡ ಟಿಪ್ಪು ಬಿದ್ದಪ್ಪ, ತೀತರಮಾಡ ಪಿ. ಜಗದೀಶ್, ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌರವ ಅಧ್ಯಕ್ಷ ಸಣ್ಣುವಂಡ ರಮೇಶ್, ಮಾನಿಲ್ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಚೆಪ್ಪುಡೀರ ಪ್ರದೀಪ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.