ಮಡಿಕೇರಿ, ಆ. 21: ಪ್ರಸಕ್ತ (2019-20) ಸಾಲಿನಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೊಡಗು ಜಿಲ್ಲಾ ವತಿಯಿಂದ ಮಹಿಳೆಯರಿಗಾಗಿ ಪಶುಸಂಗೋಪನಾ ಕಾರ್ಯಕ್ರಮದಡಿ ಅಮೃತ ಯೋಜನೆ ಹೈನುಗಾರಿಕೆ, 3 ಕುರಿ, ಮೇಕೆ ಸಾಕಾಣಿಕೆ ಘಟಕ ಮತ್ತು ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ 2013 ರಡಿ ಬಳಕೆಯಾಗದೆ ಇರುವ ಮೊತ್ತ ಯೋಜನೆಯಡಿ ಹೈನುಗಾರಿಕೆ, 3 ಕುರಿ, ಮೇಕೆ ಘಟಕ, ಹಂದಿ ಮಾಂಸದ ಘಟಕಗಳ ಅನುಷ್ಠಾನಕ್ಕಾಗಿ ಸೇವಾ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕ್ಗಳ, ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಮುಖಾಂತರ ಸಾಲ ಪಡೆದು ಕಾರ್ಯ ಕ್ರಮವನ್ನು ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಫಲಾನುಭವಿ ಆಧಾರಿತ ಕಾರ್ಯಕ್ರಮಕ್ಕೆ ಆದ್ಯತೆಯ ಮೇರೆಗೆ ಫಲಾನುಭವಿಗಳನ್ನಾಗಿ ಕೂಲಿ, ಕೃಷಿ ಕಾರ್ಮಿಕರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಆಯ್ಕೆ ಮಾಡಲಾಗುವದು. ಈ ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ವಿಶೇಷಚೇತನರಿಗೆ ಆದ್ಯತೆ ನೀಡಲಾಗುವದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ಜಾತಿ ಪ್ರಮಾಣ ಪತ್ರ ಹೊಂದಿರಬೇಕು. (ಪ್ರಮಾಣ ಪತ್ರದಲ್ಲಿ ಖಆ ಓಔ. ಇರಬೇಕು) ಮತ್ತು ಈಖUIಖಿS (ಪಶು ಭಾಗ್ಯ) ತಂತ್ರಾಂಶದ ಮೂಲಕ ಫಲಾನು ಭವಿಗಳು ಅರ್ಜಿ ಸಲ್ಲಿಸಬೇಕಾಗಿರುವ ದರಿಂದ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಹೊಂದಿರ ಬೇಕಾಗಿದೆ.
ಆಸಕ್ತರು ನಿಗದಿತ ನಮೂನೆಯ ಅರ್ಜಿಗಳನ್ನು ತಮ್ಮ ವ್ಯಾಪ್ತಿಯ ಪಶು ವೈದ್ಯಕೀಯ ಸಂಸ್ಥೆಗಳಿಂದ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಸೆಪ್ಟಂಬರ್ 18 ರೊಳಗೆ ಕಚೇರಿಯ ವೇಳೆಯಲ್ಲಿ ಸಲ್ಲಿಸಬಹುದು ಹಾಗೂ ಪಶುಭಾಗ್ಯ ತಂತ್ರಾಂಶದ ಮೂಲಕ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ತಾಲೂಕು ಸಹಾಯಕ ನಿರ್ದೇಶಕರುಗಳನ್ನು ಕಚೇರಿ ವೇಳೆಯಲ್ಲಿ, ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ, ಮಡಿಕೇರಿ ದೂ. 08272-228805, ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ, ವೀರಾಜಪೇಟೆ ದೂ. 08274-257228, ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ, ಸೋಮವಾರಪೇಟೆ ದೂ. 08276-282127 ನ್ನು ದೂರವಾಣಿ ಮೂಲಕ/ ಖುದ್ದಾಗಿ ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೆಶಕ ಡಾ. ಎ.ಬಿ. ತಮ್ಮಯ್ಯ ತಿಳಿಸಿದ್ದಾರೆ.