ಮಡಿಕೇರಿ: ಮಡಿಕೇರಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ಡಾ. ವಿಜಯ್ ಅಂಗಡಿ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪು ಮಾಡಿಕೊಂಡರು.

ಆಕಾಶವಾಣಿಯ ಉದ್ಯೋಗಿಗಳಾದ ಕೆ.ಜಿ. ಶಾರದಾ ಮತ್ತು ಜಯಂತಿ ಬಾಯಿ ಅವರನ್ನು ಸನ್ಮಾನಿಸಲಾಯಿತು.

ಸೋಮವಾರಪೇಟೆ: ಪವಿತ್ರ ಹಜ್ ಯಾತ್ರೆಗೆ ತೆರಳಿರುವ ಕನ್ನಡಿಗ ಯಾತ್ರಿಕರು ಹಜ್ ಕ್ಯಾಂಪ್‍ನಲ್ಲಿನ ಪ್ರಾರ್ಥನಾ ಭವನದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದರು.

ಇಲ್ಲಿನ ಜಲಾಲಿಯಾ ಮಸೀದಿಯ ಧರ್ಮಗುರು ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿದರು.

ಈ ಸಂದರ್ಭ ಹಾವೇರಿಯ ಮುಸ್ತಫ, ಅಬ್ದುಲ್ ರಹಮಾನ್ ಬಾಖವಿ, ಡಿಕೆಎಸ್ಸಿ ನಾಯಕ ಅಬ್ಬಾಸ್ ಹಾಜಿ, ಕೆಸಿಎಫ್ ಮುಖಂಡರಾದ ಮೂಸಾ ಹಾಜಿ, ರಾಜ್ಯ ದಾರಿಮೀಸ್ ಉಪಾಧ್ಯಕ್ಷ ಮಾಹಿನ್ ದಾರಿಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದೇವಣಗೇರಿ: ವೀರಾಜಪೇಟೆ ಸಮೀಪದ ಬಿ.ಸಿ. ಪ್ರೌಢಶಾಲೆ ದೇವಣಗೇರಿಯಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ನೆರವೇರಿಸಿದರು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಶಿಕ್ಷಕಿ ವಿ.ಸಿ. ಸುನೀತ ಸ್ವಾಗತಿಸಿ, ಪ್ರಮೀಳಾ ಕುಮಾರಿ ನಿರೂಪಿಸಿ, ವಿ.ಆರ್. ಸಂದೀಪ್ ವಂದಿಸಿದರು.

ಟಿ. ಶೆಟ್ಟಿಗೇರಿ: ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದಿಂದ ಅಧ್ಯಕ್ಷ ಕಟ್ಟೆರ ವಿಶ್ವನಾಥ್ ಸಮ್ಮುಖ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಕಾರ್ಯದರ್ಶಿ ಉಳುವಂಗಡ ಗಣಪತಿ, ಖಜಾಂಚಿ ಚಂಗುಲಂಡ ಸತೀಶ್, ಉಪ ಕಾರ್ಯದರ್ಶಿ ಎ.ಪಿ. ಮೋಟಯ್ಯ ಮತ್ತು ಇತರ ಸದಸ್ಯರು ಹಾಜರಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಓ ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಿದರು. ಸದಸ್ಯರುಗಳಾದ ದಶಮಿ, ಕಾವೇರಮ್ಮ, ಯಶೋದ, ಸುಬೈದ, ಸುಮಿತ, ರೂಪ, ಜಯಲಕ್ಷ್ಮಿ, ಅನೀಸ್, ಅಮ್ಮತ್ತಿರ ಸುರೇಶ್, ಲಕ್ಷ್ಮಣ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

ಸುಂಟಿಕೊಪ್ಪ: ಬೋಯಿಕೇರಿ ಹೆಲಿಂಗ್ ಹ್ಯಾಂಡ್ ಅಸೋಸಿಯೇಷನ್‍ನ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬೋಯಿಕೇರಿ ಸಮುದಾಯ ಭವನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ನಿವೃತ್ತ ಸಹಾಯಕ ಆರಕ್ಷಕ ಉಪ ನಿರೀಕ್ಷಕ ಜಗದೀಶ್ ಪಂಚಾಯಿತಿ ನೀರು ಸರಬರಾಜು ನಿವೃತ್ತ ನೌಕರ ಸುಧಾಕರ್ ಅವರುಗಳನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳಾದ ಕೃಷ್ಣಪ್ಪ, ಮಹೇಶ, ದಿನೇಶ್, ಪ್ರಜ್ವಲ್ ತಿಮ್ಮಣ್ಣ, ಧರ್ಮ, ಗಣಿ, ಪ್ರವೀಣ್ ಪೂಜಾರಿ, ರವಿ, ಪಂಡಿತ್ ನವೀನ್ ಮತ್ತಿತರರು ಇದ್ದರು.

ಶನಿವಾರಸಂತೆ: ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಬಿಂದು ಸುರೇಶ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯೋಪಾಧ್ಯಾಯ ಮಂಜುನಾಥ್ ಪಾಲ್ಗೊಂಡಿದ್ದರು.

ಶಿಕ್ಷಕ ಸತೀಶ್ ಹಾಗೂ ವಿದ್ಯಾರ್ಥಿಗಳು ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಪೂರ್ವ ಹೋರಾಟದ ಚಿತ್ರಣವನ್ನು ಎಲ್ಲರ ಮುಂದಿಟ್ಟರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖೇನ ಎಲ್ಲರನ್ನು ರಂಜಿಸಿದರು. ಪ್ರಕೃತಿ ವಿಕೋಪಗಳ ನಡುವೆಯೂ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.

ಕಾಟಕೇರಿ: ಕಾಟಕೇರಿಯ ಕೂರನಬಾಣೆಯಲ್ಲಿ ಸ್ತ್ರೀ ಶಕ್ತಿ ಸಂಘ ಹಾಗೂ ಗ್ರಾಮಸ್ಥರಿಂದ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಗ್ರಾಮಸ್ಥರೆಲ್ಲ ಸೇರಿ ಸ್ವಚ್ಛತಾ ಕಾರ್ಯ ಮಾಡಿದರು. ನಂತರ ಸಿಹಿ ಹಂಚಿ ಸಂಭ್ರಮಿಸಿದರು.ಮಡಿಕೇರಿ: ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ ಧ್ವಜಾರೋಹಣ ನೆರವೇರಿಸಿದರು. ಮಾಜಿ ಮ್ಯಾನೇಜಿಂಗ್ ಟ್ರಸ್ಟಿಗಳಾದ ಟಿ.ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಕೆ. ತಿಮ್ಮಪ್ಪ, ಸುಮಾ ಶೆಣೈ ಮೊದಲಾದವರು ಭಾಗವಹಿಸಿದ್ದರು.

ಚಿಕ್ಕಮುಂಡೂರು: ಚಿಕ್ಕಮುಂಡೂರು ದವಸ ಭಂಡಾರದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಊರಿನ ಹಿರಿಯ ಕಳ್ಳಿಚಂಡ ಬೋಪಯ್ಯ ಹಾಗೂ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ ಧ್ವಜಾರೋಹಣ ನೆರವೇರಿಸಿದರು.

ಮಲ್ಚಿರ ಚಂಗಪ್ಪ, ಮುಂಡುಮಡ ದೇವಯ್ಯ, ಮುಂಡುಮಡ ಗಣಪತಿ ಪಾಲ್ಗೊಂಡಿದ್ದರು. ಅತಿಥಿಗಳಾಗಿ ಕಳ್ಳಿಚಂಡ ಬೋಪಯ್ಯ, ದವಸ ಭಂಡಾರದ ಅಧ್ಯಕ್ಷ ಮುಂಡುಮಡ ಗಣೇಶ್, ಶಿಕ್ಷಕಿ ಚಿಮ್ಮಣಮಡ ಬೇಬಿ, ಅಜ್ಜಿಕುಟೀರ ಶಾಂತಿ ಮೊಣ್ಣಪ್ಪ, ಚಿಮ್ಮಣಮಡ ಸೋಮಯ್ಯ, ಗ್ರಾ.ಪಂ. ಸದಸ್ಯ ಪ್ರೀತಮ್ ಪೊನ್ನಪ್ಪ, ದವಸ ಭಂಡಾರದ ಮಾಜಿ ಅಧ್ಯಕ್ಷ ಅಜ್ಜಿಕುಟೀರ ಅಚ್ಚಯ್ಯ, ಡಾಲಾ ಮೊಣ್ಣಪ್ಪ, ಕಳ್ಳಿಚಂಡ ಉಮೇಶ್ ಗುತ್ತಿಗೆದಾರ ಚಿಮ್ಮಣಮಡ ವಾಸು ಉತ್ತಪ್ಪ, ಐನಂಡ ಬೇಬಿ ತಮ್ಮಯ್ಯ, ಅಜ್ಜಿಕುಟಿರ ಸೋಮಯ್ಯ, ಮುಂಡುಮಡ ರಾಮು ಉತ್ತಪ್ಪ, ಕಳ್ಳಿಚಂಡ ಪೊನ್ನಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲರಾದ ಪ್ರೊ. ಕೆ.ವಿ. ಕುಸುಮಾಧರ್ ಧ್ವಜಾರೋಹಣ ನೆರವೇರಿಸಿದರು. ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಮಾಜಿ ಯೋಧ ಕೆ. ಸುಧಾಕರ್, ಎನ್‍ಎಸ್‍ಎಸ್ ಆಧಿಕಾರಿ ಎನ್.ಪಿ. ರೀತ, ಎನ್‍ಸಿಸಿ ಅಧಿಕಾರಿಗಳಾದ ಎಂ.ಆರ್. ಅಕ್ರಂ, ಐ.ಡಿ. ಲೇಪಾಕ್ಷಿ ಹಾಗೂ ರೇಂಜರ್ಸ್ ಅಧಿಕಾರಿ ಎಂ.ಸಿ. ಸೀಮಾ ಎನ್‍ಸಿಸಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಚೆಟ್ಟಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಜರುಗಿತು. ಪಂಚಾಯಿತಿ ಅಧ್ಯಕ್ಷೆ ವತ್ಸಲ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಸಿಬ್ಬಂದಿಗಳಾದ ಪ್ರಶಾಂತ್, ಸಾಹಿರ, ಕಂದಸ್ವಾಮಿ, ಕಂಡಕರೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಧನು ಪ್ರಕಾಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಆಟೋ ಚಾಲಕರು ಇದ್ದರು.*ಗೋಣಿಕೊಪ್ಪಲು: ತಾಲೂಕು ಪಂಚಾಯಿತಿ ವತಿಯಿಂದ ಪೆÇನ್ನಂಪೇಟೆ ಸಾಮಾಥ್ರ್ಯ ಸೌಧ ಸಭಾಂಗಣದ ಮುಂಭಾಗದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಧ್ವಜಾರೋಹಣ ನೆರವೇರಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಷಣ್ಮುಗ ಹಾಗೂ ಸಿಬ್ಬಂದಿ ಹಾಜರಿದ್ದರು.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಸದಸ್ಯರುಗಳಾದ ನೂರೇರ ರತಿ ಅಚ್ಚಪ್ಪ, ಮಮಿತ, ಸುರೇಶ್ ರೈ ಹಾಜರಿದ್ದರು. ಗೋಣಿಕೊಪ್ಪಲು ವಾಹನ ಚಾಲಕರ ಸಂಘದ ವತಿಯಿಂದ ಮತ್ತು ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಧ್ವಜಾರೋಹಣ ಮಾಡಿದರು. ವಾಹನ ಚಾಲಕ ಸಂಘದ ಉಪಾಧ್ಯಕ್ಷ ಶರತ್ ಕಾಂತ್, ಕಾರ್ಯದರ್ಶಿ ಕೃಷ್ಣೇ ಗೌಡ, ಸಹ ಕಾರ್ಯದರ್ಶಿ ರೇಣುಕುಮಾರ್, ಖಜಾಂಚಿ ಯು.ಟಿ. ವೆಂಕಟೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜಪ್ಪು ಸುಬ್ಬಯ್ಯ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

ಕೈಕೇರಿ ಪತಂಜಲಿ ಯೋಗ ಕೇಂದ್ರ ಮತ್ತು ವಿವೇಕ ಜಾಗೃತ ಬಳಗದ ವತಿಯಿಂದ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ನಡೆಸಿದರು. ಸುಮಾರು 100ಕ್ಕೂ ಹೆಚ್ಚು ಸಾರ್ವಜನಿಕರು ರಕ್ತದಾನ ಮಾಡಿದರು. ಕೈಕೇರಿ ಪತಂಜಲಿ ಯೋಗ ಕೇಂದ್ರದ ಗುರುಬಲ್ಲಾಳ್, ವಿವೇಕ ಜಾಗೃತಿ ಬಳಗದ ಸಂಚಾಲಕ ಬಿ.ಎಸ್. ಕುಮಾರ್ ಹಾಗೂ ಪಧಾದಿಕಾರಿಗಳು ಹಾಜರಿದ್ದರು.

ಗೋಣಿಕೊಪ್ಪಲು ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಂತರ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾತಂತ್ರ್ಯೋತ್ಸವವನ್ನು ಮಕ್ಕಳೊಂದಿಗೆ ಸಂಭ್ರಮಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶಾಂತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಹಾಗೂ ಸಹ ಶಿಕ್ಷಕರು ಇದ್ದರು. ಗೋಣಿಕೊಪ್ಪಲು ಅನುಧಾನಿತ ಪ್ರೌಢಶಾಲೆ, ಕೂರ್ಗ ಪಬ್ಲಿಕ್ ಶಾಲೆ, ಲಯನ್ಸ್, ಹಾತೂರು ಪ್ರೌಢಶಾಲೆ, ಕಾಲ್ಸ್ ಶಾಲೆಗಳಲ್ಲಿ ಧ್ವಜಾರೋಹಣ ನೆರವೇರಿತು. ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ ಧ್ವಜಾರೋಹಣ ನೆರವೇರಿಸಿದರು.

ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಕಚೇರಿಯಲ್ಲಿ ವೃತ್ತ ನಿರೀಕ್ಷಕ ದಿವಾಕರ್ ಧ್ವಜಾರೋಹಣ ನೆರವೇರಿಸಿದರು. ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಗೋಣಿಕೊಪ್ಪಲು ಅಚ್ಚಪ್ಪ ಬಡಾವಣೆಯಲ್ಲಿ ಗ್ರಾ.ಪಂ. ಸದಸ್ಯೆ ರತಿ ಅಚ್ಚಪ್ಪ ಧ್ವಜಾರೋಹಣ ನೆರವೇರಿಸಿದರು. ಬಡಾವಣೆ ಅಧ್ಯಕ್ಷ ಸುಳ್ಳಿಮಾಡ ನಾಚಪ್ಪ, ಹೇಮಾವತಿ, ಶ್ಯಾಮ್ ಪೂಣಚ್ಚ, ವಿಶ್ವನಾಥ್ ಹಾಜರಿದ್ದರು. ಪೆÇನ್ನಂಪೇಟೆ ಗ್ರಾ.ಪಂ. ವತಿಯಿಂದ ಗ್ರಾ.ಪಂ. ಅಧ್ಯಕ್ಷ ಸುಮಿತ ಗಣೇಶ್ ಧ್ವಜಾರೋಹಣ ನೆರವೇರಿಸಿದರು. ಸದಸ್ಯರುಗಳಾದ ಅಮ್ಮತ್ತಿರ ಸುರೇಶ್, ಜಯಲಕ್ಷ್ಮಿ, ಮೂಕಳೇರ ಕಾವ್ಯ, ಮೂಕಳೇರ ಲಕ್ಷ್ಮಣ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಜರಿದ್ದರು. ಪೆÇನ್ನಂಪೇಟೆ ಪೆÇಲೀಸ್ ಠಾಣಾ ವತಿಯಿಂದ ಠಾಣಾಧಿಕಾರಿ ಮಹೇಶ್ ದ್ವಜಾರೋಹಣ ನೆರವೇರಿಸಿದರು. ಪೆÇನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲೆ, ಕಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಜ್ಯೂನಿಯರ್ ಕಾಲೇಜ್, ಐ.ಟಿ.ಐ ಕಾಲೇಜ್, ಕ್ರೀಡಾ ವಸತಿ ನಿಲಯದಲ್ಲಿ ಧ್ವಜಾರೋಹಣ ಮಾಡಲಾಯಿತು. ಪೆÇನ್ನಂಪೇಟೆ ವಿಘ್ನೇಶ್ವರ ವಾಹನ ಚಾಲಕರ ಸಂಘ ಮತ್ತು ಆಟೋ ಚಾಲಕರ ಸಂಘದ ವತಿಯಿಂದ ದ್ವಜಾರೋಹಣ ನಡೆಸಿದರು. ತಿತಿಮತಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಧ್ವಜಾರೋಹಣ ಮಾಡಿದರು. ಸದಸ್ಯರುಗಳಾದ ಅನೂಪ್, ಚುಬ್ರು, ವಿಜಯ, ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತ ಜಗದೀಶ್ ಉಪಸ್ಥಿತರಿದ್ದರು. ತಿತಿಮತಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಜೂನಿಯರ್ ಕಾಲೇಜ್, ಮರೂರು ಆಶ್ರಮ ಶಾಲೆ, ಬಾಲಕಿಯರ ಆಶ್ರಮ ಶಾಲೆ, ವಿ.ಎಸ್.ಎಸ್.ಎನ್. ಬ್ಯಾಂಕ್, ಅರಣ್ಯ ಇಲಾಖೆ, ಮತ್ತಿಗೋಡು ವಲಯ ಅರಣ್ಯ ಕಚೇರಿಗಳಲ್ಲಿ ಧ್ವಜಾರೋಹಣ ನಡೆಯಿತು. ದೇವರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಧ್ವಜಾರೋಹಣ ನೆರವೇರಿಸಿದರು. ಬಾಳೆಲೆ ಗ್ರಾ.ಪಂ. ವತಿಯಿಂದ ಅಧ್ಯಕ್ಷೆ ಕುಸುಮಾ ಧ್ವಜಾರೋಹಣ ನಡೆಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಪ್ರತಾಪ್ ಧ್ವಜಾರೋಹಣ ನೆರವೇರಿಸಿದರು. ಶುಶ್ರೂಷÀಕಿಯರುಗಳಾದ ಚಂದ್ರಕಲಾ, ವಿದ್ಯ, ಚೇತನ್, ಸಿಬ್ಬಂದಿ ಉಪಸ್ಥಿತರಿದ್ದರು.

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಸಂಸ್ಥೆಯ ಡೀನ್ ಡಾ. ಕಾರ್ಯಪ್ಪ ಅಧ್ಯಕ್ಷತೆ ವಹಿಸಿ, ಧ್ವಜಾರೋಹಣ ನೆರೆವೇರಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್‍ಕುಮಾರ್, ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ಸ್ಥಾನೀಯ ವೈದ್ಯಾಧಿಕಾರಿ ಡಾ. ಮಂಜುನಾಥ ಮಾತನಾಡಿದರು. ಎಂಬಿಬಿಎಸ್ ವಿದ್ಯಾರ್ಥಿಗಳಿಂದ ದೇಶಭಕ್ತಿ ಗಾಯನ ನಡೆಯಿತು. ಬೋಧಕ ಆಸ್ಪತ್ರೆಯ ವೈದ್ಯರುಗಳು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸಂಪಾಜೆ: ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಎಸ್. ಭಟ್ ಧ್ವಜಾರೋಹಣಗೈದರು.

ಕಾಲೇಜಿನ ಪ್ರಾಂಶುಪಾಲೆ ಮಾಲತಿ, ಮುಖ್ಯ ಶಿಕ್ಷಕ ಐತಪ್ಪ ನಾಯ್ಕ, ಶಾಲಾ ಅಡಳಿತ ಮಂಡಳಿ ಸದಸ್ಯರು, ಲಯನ್ಸ್ ಕ್ಲಬ್ ಅಧ್ಯಕ್ಷ ಕಿಶೋರ್, ಕಾರ್ಯದರ್ಶಿ ಸಂದ್ಯಾ ಸಚಿತ್ ರೈ, ಕಿಶೋರ್ ಕುಮಾರ್, ಪ್ರಶಾಂತ್, ವಾಸುದೇವ ಕಟ್ಟೆಮನೆ ಉಪಸ್ಥಿತರಿದ್ದರು. ಈ ಸಂದರ್ಭ ಸಂಪಾಜೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು.

ಗುಡ್ಡೆಹೊಸೂರು: ಗುಡ್ಡೆಹೊಸೂರಿನಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ತೆಪ್ಪದಕಂಡಿಯ ನಿರಾಶ್ರಿತರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಡಿ.ಐ.ಇ.ಆರ್.ಟಿ. ವೆಂಕಟೇಶ್ ಉಪಸ್ಥಿತರಿದ್ದರು. ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ್ ಹಾಜರಿದ್ದರು. ಮಕ್ಕಳಿಂದ ದೇಶಭಕ್ತಿ ಗೀತೆ ನಡೆದವು. ದಿನದ ಮಹತ್ವವನ್ನು ಶಿಕ್ಷಕಿ ಜಯಂತಿ ತಿಳಿಸಿದರು. ಶಿಕ್ಷಕಿ ಮರಿಯಾ ನಿರೂಪಿಸಿ, ರುಕ್ಮಿಣಿ ವಂದಿಸಿದರು.

ಕೊಟ್ಟಮುಡಿ: ಕೊಟ್ಟಮುಡಿ ಹಳೇ ಜುಮಾ ಮಸೀದಿ ಜಮಾಅತ್ ವತಿಯಿಂದ ಸ್ಥಳೀಯ ದಾರುಲ್ ಉಲೂಮ್ ಸುನ್ನೀ ಮದಸರ ವಠಾರದಲ್ಲಿ ಆಚರಿಸಲಾಯಿತು. ಈ ಸಂದರ್ಭ ಕೊಟ್ಟಮುಡಿ ಅಧ್ಯಕ್ಷ ಅಬ್ದುಲ್ಲಾ ಸಖಾಫಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಯು. ಹಸನ್, ಕೇಮಾಡಿ ಮಸೀದಿ ಅಧ್ಯಕ್ಷ ಸಾದುಳಿ, ಅಶ್ರಫ್ ಖಾಸ್ಮಿ, ಕೊಟ್ಟಮುಡಿ ಶಾಖಾ ಅಧ್ಯಕ್ಷ ರಫೀಕ್ ಸಖಾಫಿ, ನಾಪೋಕ್ಲು ಕಾರ್ಯದರ್ಶಿ ಸ್ವಲಾಉದ್ದೀನ್ ಹಾಗೂ ಮದರಸ ವಿದ್ಯಾರ್ಥಿಗಳು ಇದ್ದರು.

ಮಡಿಕೇರಿ: ಭಾರತದ 73ನೇ ಸ್ವಾತಂತ್ರ್ಯೋತ್ಸವವನ್ನು ನಗರದ ಶಾಂತಿನಿಕೇತನ ಯುವಕ ಸಂಘ ಹಾಗೂ ಮಹಿಳಾ ಸಂಘದ ಆಶ್ರಯದಲ್ಲಿ ನೆರವೇರಿಸಲಾಯಿತು. ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದರು. ಪ್ರಮುಖರಾದ ಕೆ.ಹೆಚ್. ಚೇತನ್, ಮನು ಮಂಜುನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಮಹಿಳಾ ಪ್ರಮುಖರು, ಮಕ್ಕಳು ಪಾಲ್ಗೊಂಡು ಸಿಹಿ ಹಂಚಿ ಸಂಭ್ರಮಿಸಿದರು.

* ಮಂಗಳಾದೇವಿ ನಗರದ ಶ್ರೀ ಆದಿ ಪರಾಶಕ್ತಿ ಯುವಕ ಸಂಘದ ವತಿಯಿಂದ ನಡೆದ ಸ್ವಾತಂತ್ರ್ಯವ ಧ್ವಜಾರೋಹಣವನ್ನು ನಿವೃತ್ತ ಯೋಧ ಸುರೇಶ್ ನೆರವೇರಿಸಿದರು.