ಚೆಟ್ಟಳ್ಳಿ, ಆ. 22: ಸಮೀಪದ ಪೊನ್ಮತ್‍ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸ ವತಿಯಿಂದ ಇತ್ತೀಚೆಗೆ ನಿಧನರಾದ ಸಮಸ್ತ ವಿಧ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿಯಾದ ಶೈಖುನಾ ಖಾಸಿಂ ಮುಸ್ಲಿಯಾರ್ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮವು ಮದರಸ ಮುಖ್ಯೋಪಾಧ್ಯಾಯ ಸಹದ್ ಫೈಝಿ ಅವರ ನೇತೃತ್ವದಲ್ಲಿ ನಡೆಯಿತು.

ಖಾಸಿಂ ಮುಸ್ಲಿಯಾರ್ ಅವರ ಜೀವನ ಚರಿತ್ರೆಯ ಕುರಿತು ಸಹದ್ ಫೈಝ್ ಮಾತನಾಡಿದರು. ಕಾರ್ಯಕ್ರಮವನ್ನು ಜಲಾಲ್ ಮೌಲವಿ ಉದ್ಘಾಟಿಸಿದರು. ಈ ಸಂದರ್ಭ ಮಹಲ್ ಖತೀಬರಾದ ಶಾದುಲಿ ಸಖಾಫಿ, ಮೈದು ಸಖಾಫಿ ಹಾಗೂ ವಿದ್ಯಾರ್ಥಿಗಳು ಇದ್ದರು.