ಕುಶಾಲನಗರ, ಆ. 20: ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಕುಶಾಲನಗರದ ಕಾವೇರಿ ಛಾಯಾಗ್ರಾಹಕರ ಸಂಘದ ವತಿಯಿಂದ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವದರೊಂದಿಗೆ ಆಚರಿಸಲಾಯಿತು. ರಾಜ್ಯ ನೆರೆ ಹಾವಳಿಯಿಂದ ತತ್ತರಿಸಿರುವ ಕಾರಣ ಈ ಬಾರಿ ಸರಳವಾಗಿ ಆಚರಿಸಿದ್ದೇವೆ ಎಂದು ಕಾವೇರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶಾಂತಪ್ಪ ಹೇಳಿದರು.
ಸಂಘದ ಪದಾಧಿಕಾರಿಗಳು ಆಸ್ಪತ್ರೆಯಲ್ಲಿ ಇದ್ದ ಎಲ್ಲಾ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು. ರಾಜ್ಯ ಸಮಿತಿಯ ನಿರ್ದೇಶಕ ಕೆ.ಎಸ್. ನಾಗೇಶ್, ಮಾಜಿ ನಿರ್ದೇಶಕರಾದ ಹೆಚ್.ಎಸ್. ಸಲೀಂ, ಕೆ.ಪಿ. ನಾಗೇಂದ್ರ, ಜಿಲ್ಲಾಧ್ಯಕ್ಷ ವಿಶ್ವ, ಪ್ರಶಾಂತ್, ರಾಜು, ಮಾದು, ಬೊಪ್ಪಯ್ಯ, ಲವ ಮತ್ತಿತರರು ಇದ್ದರು.