ಗೋಣಿಕೊಪ್ಪ ವರದಿ, ಆ. 20 : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಭೇಟೆ ಆರೋಪದಡಿ ಮೂವರು ಆರೋಪಿಗಳನ್ನು ಆನೆಚೌಕೂರು ವನ್ಯಜೀವಿ ವಲಯ, ಹುಲಿ ಸಂರಕ್ಷಣಾ ವಿಶೇಷ ತಂಡ ಮತ್ತು ತಿತಿಮತಿ ಅರಣ್ಯ ವಲಯ ತಂಡ ಬಂಧಿಸಿದೆ.

ಬಂಧಿತರಿಂದ ಒಂದು ಓಮಿನಿ ವ್ಯಾನ್, ಕೋವಿ ಮತ್ತು ಜೀವಂತ ಮದ್ದುಗುಂಡುಗಳನ್ನು ವಶಪಡಿಸಿ ಕೊಂಡು ಆರೋಪಿಗಳನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆನೆಚೌಕೂರು ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ. ಈ ಸಂದರ್ಭ ಖಚಿತ ಮಾಹಿತಿ ಆಧರಿಸಿ (ಮೊದಲ ಪುಟದಿಂದ) ಕಾರ್ಯಾಚರಣೆ ನಡೆಸಿರುವ ಸಿಬ್ಬಂದಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.ವೀರಾಜಪೇಟೆ ತಾಲೂಕಿನ ಅಂಬಟ್ಟಿ ಗ್ರಾಮದ ಖಾಲಿದ್ ಆಲಿಯಾಸ್ ಮೊಹಮ್ಮದ್ (58), ಶಾನು ಆಲಿಯಾಸ್ ಅಮ್ರಿಜನ್ (39), ಜಿಲ್ಯಾದ್ ಆಲಿಯಾಸ್ ಖಾಲಿದ್ (23) ಬಂಧಿಸಲಾಗಿದೆ. ಆರೋಪಿ ಗಳಿಂದ ಒಂಟಿ ನಳಿಕೆಯ 2 ಕೋವಿ, 8 ಜೀವಂತ ಮದ್ದುಗುಂಡು, 1 ಖಾಲಿ ಮದ್ದುಗುಂಡು, 1 ಚಾಕು, 2 ಆಂಡ್ರಾಯ್ಡ್ ಫೋನ್, ಮಾರುತಿ ಓಮ್ನಿ ಕಾರು, 2 ಪ್ಲಾಸ್ಟಿಕ್ ಬ್ಯಾಗ್ ಮತ್ತು 2 ಖಾಲಿ ಚೀಲ ವಶ ಪಡಿಸಿಕೊಳ್ಳಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ನಿರ್ದೇಶಕ ನಾರಾಯಣ ಸ್ವಾಮಿ, ಎಸಿಎಫ್ ಪ್ರಸನ್ನಕುಮಾರ್ ನಿರ್ದೇನದಂತೆ ಆರ್‍ಎಫ್‍ಒ ಶಿವಾನಂದ್ ನಿಂಗಣಿ, ಡಿಆರ್‍ಎಫ್‍ಒ ಶಿವಪ್ರಸಾದ್, ಸಿಬ್ಬಂದಿ ಯೋಗೇಶ್ವರಿ, ಸತೀಶ್, ಶಿವಲಿಂಗಯ್ಯ, ಶಶಿ, ಗೌಡ, ಸುದೀಪ್, ನರೇಶ್, ಬಾಬಾ ಫರೀದ್, ಉಮಾಶಂಕರ್, ಶಿವಯ್ಯ, ಚಾಲಕ ಪ್ರದೀಪ್, ಶಿರಾಜ್ ಪಾಲ್ಗೊಂಡಿದ್ದರು. -ಸುದ್ದಿಪುತ್ರ