ಗೋಣಿಕೊಪ್ಪ ವರದಿ, ಆ. 19: ಮಳೆಯ ಕಾರಣ ಮುಂದೂಡಲ್ಪಟ್ಟಿದ್ದ ಗೋಣಿಕೊಪ್ಪ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಪ್ರಾಥಮಿಕ ಶಾಲಾ ಮಟ್ಟದ ವಾಕ್ಚಾತುರ್ಯ, ದೇಶಭಕ್ತಿ ಗೀತೆ ಹಾಗೂ ಸ್ವರಚಿತ ಕವನ ವಾಚನ ಸ್ಪರ್ಧೆಗಳನ್ನು ತಾ.22 ರಂದು ಗೋಣಿಕೊಪ್ಪ ಲಯನ್ಸ್ ನರ್ಸರಿ ಮತ್ತು ಪ್ರೈಮರಿ ಶಾಲಾ ಸಭಾಂಗಣದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಸಲಾಗುವದು ಎಂದು ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಅಮ್ಮಂಡ ಚಿಣ್ಣಪ್ಪ ತಿಳಿಸಿದ್ದಾರೆ.