ಸುಂಟಿಕೊಪ್ಪ,ಆ.19 : ಸುಂಟಿಕೊಪ್ಪ ಹೋಬಳಿ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ರಕ್ಷಾ ಬಂಧನ ಹಮ್ಮಿಕೊಳ್ಳಲಾಯಿತು. ಸಂಘದ ಕಚೇರಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ.ಮುಖೇಶ್ ವಹಿಸಿ ದಿನದ ಮಹತ್ವದ ಕುರಿತು ಮಾತನಾಡಿದರು. ದೇಯಿಬೈದೇದಿ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಗೀತಾ ವಿಶ್ವನಾಥ, ಖಜಾಂಜಿ ಬಿ.ಎಂ.ಚಂದ್ರ, ಬಿ.ಕೆ.ರಮೇಶ, ಸಹಕಾರ್ಯದರ್ಶಿ ಬಿ.ಆಲ್. ಮಿಲನ್‍ಪೂಜಾರಿ, ಕ್ರೀಡಾ ಕಾರ್ಯದರ್ಶಿ ಬಿ.ಆರ್. ಹರೀಶ್, ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಮೊದಲಾದವರು ಭಾಗವಹಿಸಿದರು.