ಕೂಡಿಗೆ, ಆ. 19 : ಕೂಡಿಗೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ನಿರ್ಮಿಸಿ ರುವ ಸಭಾಂಗಣದ ಸಮೀಪದಲ್ಲಿ ತಡೆಗೋಡೆಯನ್ನು ನಿರ್ಮಿಸಿಕೊಡುವ ದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ಅವರು ಭರವಸೆ ನೀಡಿದ್ದಾರೆ. ಶ್ರೀ ರಾಮಲಿಂಗೇಶ್ವರ ದೇವಾಲಯವು ಕಾವೇರಿ ನದಿ ದಟ ದಲ್ಲಿದ್ದು, ದೇವಾಲಯದ ಪಕ್ಕ ದಲ್ಲಿಯೇ ವಿವಾಹ ಸಮಾರಂಭಕ್ಕೆ, ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸಭಾಂಗಣ ವನ್ನು ನಿರ್ಮಿಸಲಾಗಿದೆ. ಕಾವೇರಿ ನದಿ ಹರಿಯುವ ಸ್ಥಳವಾಗಿದ್ದು, ತೂಗು ಸೇತುವೆ, ಹಾಗೂ ಪಕ್ಕ ದಲ್ಲಿಯೇ ಮನೆಗಳು ಇರುವದರಿಂದ ನದಿ ದಟದಿಂದ ಸ್ವಲ್ಪ ದೂರಕ್ಕೆ ತಡೆಗೋಡೆಯನ್ನು ನಿರ್ಮಿಸುವದು ಅಗತ್ಯವಾಗಿದೆ. ಈಗಾಗಲೇ 25 ಮೀಟರ್ ಅಷ್ಟು ದೂರಕ್ಕೆ ಶಾಸಕರ ಅನುದಾನ ಮತ್ತು ಪ್ರಯತ್ನದಿಂದ ಕಾವೇರಿ ನೀರಾವರಿ ನಿಗಮದ ವತಿಯಿಂದ ತಡೆಗೋಡೆ ನಿರ್ಮಿಸ ಲಾಗಿದೆ. ಈ ಸಾಲಿನಲ್ಲಿ ಹೆಚ್ಚುವರಿ ಯಾಗಿ ತಡೆಗೋಡೆಯನ್ನು ನಿರ್ಮಿಸುವದಾಗಿ ಕಣಿವೆಯ ತೂಗುಸೇತುವೆಯ ವೀಕ್ಷಣೆ ಮಾಡಲು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭ ಎಂ.ಪಿ.ಅಪ್ಪಚ್ಚುರಂಜನ್ ಅವರು ಭರವಸೆ ನೀಡಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, 2016-17ನೇ ಸಾಲಿನಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ 20 ಲಕ್ಷ ರೂ ವೆಚ್ಚದ ತಡೆಗೋಡೆಯನ್ನು ನಿರ್ಮಿಸ ಲಾಗಿದೆ. ಅಲ್ಲದೆ, ಈ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ, ಮಲ್ನಾಡು ಅಭಿವೃದ್ಧಿ ಯೋಜನೆ ಯಡಿಯಲ್ಲಿ ಹಣವನ್ನು ಕಾದಿರಿಸಿ ಹಂತ ಹಂತ ವಾಗಿ ತಡೆಗೋಡೆಯ ಕಾಮಗಾರಿಯನ್ನು ನಡೆಸಲಾಗು ವದು. ನದಿಯ ದಡದಲ್ಲಿ ಕಣಿವೆ ಗ್ರಾಮವಿದ್ದು, ನದಿಯ ನೀರಿನ ಕೊರೆತ ಆಗದ ರೀತಿಯಲ್ಲಿ ಇಂಜಿನಿಯರ್ ಗಳಿಂದ ಸ್ಥಳ ಪರಿಶೀಲಿಸಿ, ಮಾಹಿತಿ ಪಡೆದು ತಡೆಗೋಡೆಯ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಲೋಕೇಶ್ವರಿಗೋಪಾಲ್, ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ರೀನಿವಾಸ್, ಮಂಜುಳಾ, ತಾಲೂಕು ಪಂಚಾಯ್ತಿ ಸ್ಥಾನೀಯ ಸಮಿತಿಯ ಅಧ್ಯಕ್ಷೆ ತಂಗಮ್ಮ, ತಾ.ಪಂ. ಸದಸ್ಯರಾದ ಗಣೇಶ್, ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಕೂಡಿಗೆ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್, ಹೆಬ್ಬಾಲೆ ಗ್ರಾ.ಪಂ ಸದಸ್ಯ ಶಿವನಂಜಪ್ಪ, ತಾಲೂಕು ಬಿಜೆಪಿ ಎಸ್ಟಿ ಮೋರ್ಚದ ಅಧ್ಯಕ್ಷ ಪ್ರಭಾಕರ, ಎಸ್.ಸಿ ಮೋರ್ಚದ ಕುಮಾರಸ್ವಾಮಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಕೇಶ್, ರಾಮಲಿಂಗೇಶ್ವರ ದೇವಾಲಯ ಸಮಿತಿಯ ನಿರ್ದೇಶಕ ರಾದ ಮಧುಕುಮಾರ್, ಗಿರಿ, ಕುಮಾರ್ ಮೊದಲಾದವರು ಇದ್ದರು.