ಮಡಿಕೇರಿ, ಆ. 19 : ಕರಿಮೆಣಸು, ಏಲಕ್ಕಿ ಮತ್ತು ಶುಂಠಿ ಕೊಡಗಿನಲ್ಲಿ ಬೆಳೆಯುವ ಪ್ರಮುಖ ಮಸಾಲೆ ಬೆಳೆಗಳಾಗಿವೆ. ಜುಲೈ-ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಳೆಯಾದುದರಿಂದ ಈ ಸಂಬಾರ ಬೆಳೆಗಳನ್ನು ಹಲವಾರು ರೋಗ ಮತ್ತು ಕೀಟಗಳು ಭಾಧಿಸುತ್ತವೆ ಹಾಗಾಗಿ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಲು ಕೆಲವು ಕ್ರಮ ಕೈಗೊಳ್ಳಬೇಕು.
ಕರಿಮೆಣಸು: ನೀರು ಬಸಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಶೇ.1ರ ಬೋರ್ಡೋ ಮಿಶ್ರಣವನ್ನು ಸಿಂಪಡಿಸುವದು ಹಾಗೂ 500 ಗ್ರಾಂ ಕಾಪರ್ ಆಕ್ಸಿ ಕ್ಲೋರೈಡ್ ಅನ್ನು 200 ಲೀಟರ್ ನೀರಿನಲ್ಲಿ ಕರಗಿಸಿ ಬಳ್ಳಿಯ ಬುಡಕ್ಕೆ ಸುರಿಯುವದು. ಕೆಳಗೆ ಬಿದ್ದ ಎಲೆಗಳನ್ನು ಮತ್ತು ಕೊತ್ತುಗಳನ್ನು ತೆಗೆದು ಸ್ವಚ್ಛಮಾಡುವದು. ಫೈಟೋಪ್ತಾರ ಸೋಂಕು ತಗುಲಿದ ಹಾಗೂ ಅಕ್ಕಪಕ್ಕದ ಗಿಡಗಳಿಗೆ 1.2 ಗ್ರಾಂ/ಲೀ ಮೆಟಲಾಕ್ಸಿಲ್ +ಮ್ಯಾಂಕೋಜೆಬ್ ದ್ರಾವಣವನ್ನು ಬೆರೆಸಿ ಸಿಂಪಡಿಸುವದು ಮತ್ತು ಮಣ್ಣನ್ನು ನೆನೆಸುವದು. ಗಿಡದ ಸುತ್ತ 2-3 ಗುಳಿಗಳನ್ನು ಮಾಡಿ ಫೊರೇಟ್ (30 ಗ್ರಾಂ ಪ್ರತಿ ಬಳ್ಳಿಗೆ) ಹಾಕುವದು. 5 ಕಿ. ಗ್ರಾಂ. ಪ್ರತಿ ಗಿಡಕ್ಕೆ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ಹಾಕಿ 50 ಗ್ರಾಂ ಟ್ರೈಕೋಡರ್ಮ ಮತ್ತು ಪೊಚೋನಿಯವನ್ನು ಪ್ರತಿ ಬಳ್ಳಿಯ ಬುಡಕ್ಕೆ ನೀಡಬೇಕು. 100 ಗ್ರಾಂ ಯೂರಿಯಾ, 50 ಗ್ರಾಂ ಡಿ.ಎ.ಪಿ ಮತ್ತು 150 ಗ್ರಾಂ ಎಂ.ಒ.ಪಿ ಯನ್ನು ಪ್ರತಿ ಬಳ್ಳಿಗೆ ನೀಡುವದು.
ಏಲಕ್ಕಿ: ಚರಂಡಿಗಳನ್ನು ಶುಚಿಗೊಳಿಸುವದು ಮತ್ತು ಒಣಗಿದ ಎಲೆಗಳನ್ನು ತೆಗೆಯುವದು. ಗಿಡಗಳ ಬುಡದಲ್ಲಿನ ಒಣಗಿದ ತರಗೆಲೆಯ ಹೊದಿಕೆಯನ್ನು ತೆಗೆದು, ಪುಷ್ಪಗುಚ್ಚಗಳನ್ನು ಸುತ್ತಿ, ಗೊಬ್ಬರ ನೀಡುವದು (62.5:62.5:125 ಕೆ.ಜಿ. ಎನ್.ಪಿ.ಕೆ. ಪ್ರತಿ ಹೆಕ್ಟೇರಿಗೆ (91 ಕೆ.ಜಿ. ಯೂರಿಯಾ, 231 ಕೆ.ಜಿ. ರಾಕ್ ಫಾಸ್ಪೇಟ್ ಮತ್ತು 138 ಕೆ.ಜಿ. ಎಂ.ಒ.ಪಿ) ನೀರಾವರಿಯಿರುವ ತೋಟಗಳಿಗೆ ಮತ್ತು 37.5: 37.5: 75 ಕೆ.ಜಿ. ಎನ್ಪಿಕೆ ಪ್ರತಿ ಹೆಕ್ಟೇರಿಗೆ (81 ಕೆ.ಜಿ. ಯೂರಿಯಾ, 208 ಕೆ.ಜಿ ರಾಕ್ ಫಾಸ್ಪೇಟ್ ಮತ್ತು 125 ಕೆ.ಜಿ. ಎಂ.ಒ.ಪಿ) ಮಳೆಯಾಶ್ರಿತ ತೋಟಗಳಿಗೆ]. ಲಘು ಪೋಷಕಾಂಶ ಐ.ಐ.ಎಸ್.ಆರ್ ಕಾರ್ಡಮಮ್ ಸ್ಪೆಷಲ್ 1 ಕೆ. ಜಿ. / 200 ಲೀ ನೀರಿನಲ್ಲಿ ಕರಗಿಸಿ ಎಲೆಗಳಿಗೆ ಸಿಂಪಡಣೆ ಮಾಡುವದು. ಥ್ರಿಪ್ಸ್ ಕೀಟದ ಹತೋಟಿಗೆ ಫಿಪ್ರಾನಿಲ್ ಶೇ.5 ಎಸ್ಸಿ Sಅ (1 ಮಿ.ಲೀ. ಪ್ರತಿ ಲೀಟರು ನೀರಿಗೆ) ಅಥವಾ ಸ್ಪಿನೊಸಾಡ್ ಶೇ.45 ಎಸ್ಸಿ (0.3 ಮಿ.ಲೀ. ಪ್ರತಿ ಲೀಟರು ನೀರಿಗೆ) ಸಿಂಪಡಿಸುವದು. ಕಾಂಡ ಮತ್ತು ಕಾಯಿ ಕೊರೆಯುವ ಕೀಟದ ಹತೋಟಿಗೆ ಕ್ವಿನಾಲ್ಫಾಸ್ (2 ಮಿ.ಲೀ. ಪ್ರತಿ ಲೀಟರು ನೀರಿಗೆ) ಸಿಂಪಡಿಸುವದು. ಬೇರು ಕೊರೆಯುವ ಕೀಟದ ಹತೋಟಿಗೆ ಫೋರೇಟ್ 10 ಗ್ರಾಂ(20-40 ಗ್ರಾಂ ಪ್ರತಿ ಗಿಡಕ್ಕೆ) ಅಥವಾ ಕ್ಲೋರೋಪೈರಿಫಾಸ್ (2 ಮಿ.ಲೀ. ಪ್ರತಿ ಲೀಟರು ನೀರಿಗೆ) ಗಿಡದ ಬುಡಕ್ಕೆ ಹಾಕುವದು. ಬಲಿತ ಕಾಯಿಗಳ ಕೊಯ್ಲು ಮತ್ತು ಕಟ್ಟೆ ಪೀಡಿತ ಗಿಡಗಳನ್ನು ಕಿತ್ತು ನಾಶಮಾಡುವದನ್ನು ಮುಂದುವರಿಸಬೇಕು.
ಶುಂಠಿ: ಶುಂಠಿ ಮಡಿಗಳಿಂದ ಕಳೆ ತೆಗೆದು ಮಣ್ಣು ಏರಿಸುವದು. ರೋಗ ಸೋಂಕಿತ ಗೆಡ್ಡೆಗಳನ್ನು ತೆಗೆದು ಹಾಕಿ ಮ್ಯಾಂಕೋಜೆಬ್ (3 ಗ್ರಾಂ/ಲೀ) ಅಥವಾ ಮೆಟಲಾಕ್ಸಿಲ್-ಮ್ಯಾಂಕೋಜೆಬ್ (1.25 ಗ್ರಾಂ/ಲೀ) ಅಥವಾ ಕಾಪರ್ ಆಕ್ಸಿ ಕ್ಲೋರೈಡ್ (2.5 ಗ್ರಾಂ/ಲೀ) ಅನ್ನು ಶುಂಠಿ ಮಡಿಗಳ ಮೇಲೆ ಸುರಿಯಬೇಕು. ಕಾಂಡ ಕೊರೆಯುವ ಕೀಟದ ಹತೋಟಿಗೆ ಕ್ವಿನಾಲ್ಫಾಸ್ (0.5 ಮಿ. ಲೀ./ಲೀ) ಅನ್ನು ಸಿಂಪಡಿಸುವದು.
ಹೆಚ್ಚಿನ ಮಾಹಿತಿಗೆ ಮುಖ್ಯಸ್ಥರು, ಐ.ಸಿ.ಎ.ಆರ್.-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಲ, ಮಡಿಕೇರಿ-571 201 ದೂ.ಸಂ: 08272-245451, 245514, 298574 ಮತ್ತು ಇ-ಮೇಲ್ ಛಿಡಿಛಿ@sಠಿiಛಿes.ಡಿes.iಟಿ ನ್ನು ಸಂಪರ್ಕಿಸಬಹುದು.