ಗೋಣಿಕೊಪ್ಪಲು, ಆ. 18: ಬಾಳೆಲೆ, ನಿಟ್ಟೂರು ವ್ಯಾಪ್ತಿಯಲ್ಲಿ ಲಕ್ಷ್ಮಣ ತೀರ್ಥ ನದಿ ಪ್ರವಾಹ ಇಳಿಮುಖವಾಗಿದ್ದು, ಈ ಭಾಗದ ರೈತಾಪಿ ವರ್ಗ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಆಗಸ್ಟ್ ತಿಂಗಳಿನ ಆರಂಭದ ದಿನದಿಂದಲೂ ಸುರಿದ ಮಳೆರಾಯ ಇಲ್ಲಿನ ಕೃಷಿಕರನ್ನು ಕಂಗೆಡಿಸಿದ್ದು, ಇದೀಗ ಇಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.ಆದರೆ, ಮುಂದೆ ಭಾರೀ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದ್ದು,, ಬಾಳೆಲೆ ಲಕ್ಷ್ಮಣ ತೀರ್ಥದಲ್ಲಿ ಮತ್ತೆ ಪ್ರವಾಹ ಉಂಟಾದರೆ ಇಲ್ಲಿನ ರೈತಾಪಿ ವರ್ಗ ತೀವ್ರ ನಷ್ಟ ಅನುಭವಿಸ ಬೇಕಾಗುತ್ತದೆ. ಭತ್ತದ ಕಣಜ ಖ್ಯಾತಿಯ ಬಾಳೆಲೆ ಹೋಬಳಿಯ ಹೆಚ್ಚಿನ ಕೃಷಿ ಮಡಿಯಲ್ಲಿ ನಾಟಿಕಾರ್ಯ ಸಮರೋಪಾದಿಯಲ್ಲಿ ನಡೆದಿರುವದು ಆಶಾದಾಯಕವಾಗಿದೆ. ವರುಣ ಇನ್ನು ಮುನಿಸಿ ಕೊಳ್ಳಲಾರ ಎಂಬ ನಂಬುಗೆಯಿಂದ ರೈತರು ಕ್ಷಷಿ ಕಾರ್ಯದಲ್ಲಿ ತೊಡಗಿದ್ದು, ಇಲ್ಲಿನ ಸಾವಿರಾರು ಎಕರೆ ಗದ್ದೆಗಳು ಹೆಚ್ಚಿನ ಭತ್ತದ ಉತ್ಪಾದನೆಯ ಭರವಸೆಯನ್ನು ಕೃಷಿಕರು ಹೊಂದಿದ್ದಾರೆ.
-ಟಿ.ಎಲ್. ಶ್ರೀನಿವಾಸ್