ಮಡಿಕೇರಿ, ಆ. 18: ಒಂದು ವಾರಗಳ ಕಾಲ ಹಗಲು ಮತ್ತು ರಾತ್ರಿ ಸುಮಾರು 357 ವಸ್ತ್ರವಿನ್ಯಾಸಕರು ನಡೆಸಿಕೊಟ್ಟ ಫ್ಯಾಷನ್ ಶೋದಲ್ಲಿ ಪಾಲ್ಗೊಂಡ ಕೊಡಗಿನ ಪಾಂಡಂಡ ವಿಶ್ವನಾಥ್ ಗಿನ್ನಿಸ್ ದಾಖಲೆಗೆ ಸೇರ್ಪಡೆ ಯಾಗಿದ್ದಾರೆ.
ಕಳೆದ 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಚೆನ್ನೈನಲ್ಲಿ ನೆಲೆಸಿರುವ ಕರಡ ಗ್ರಾಮದ ಪಿ.ಡಿ. ಉತ್ತಪ್ಪ ಅವರ ಪುತ್ರ ವಿಶ್ವನಾಥ್ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.