ಚೆಟ್ಟಳ್ಳಿ, ಆ. 18 : ಸುನ್ನಿ ಯುವಜನ ಸಂಘ ಕೊಡಗು ವತಿಯಿಂದ ಐಟಿ ಸೆಲ್ ತಾ. 18 ಮತ್ತು 19ರಂದು ನಡೆಯಲಿದೆ. ಪ್ರೋಗ್ರಾಮ್ ನೆಲ್ಯಹುದಿಕೇರಿ ದಾರುನ್ನಜಾತ್ ಎಜ್ಯುಕೇಶನಲ್ ಸೆಂಟರ್‍ನಲ್ಲಿ ಸಂತ್ರಸ್ತರು ಪ್ರವಾಹದಲ್ಲಿ ಕಳೆದುಕೊಂಡ ಅಗತ್ಯ ದಾಖಲೆಗಳಾದ (ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆರ್‍ಟಿಸಿ, ಪಾಸ್ಪೋರ್ಟ್ ಇತ್ಯಾದಿ)ಗಳನ್ನು ಸರಿಪಡಿಸುವ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕೆಂದು ಎಸ್‍ವೈಎಸ್ ಕೊಡಗು ಜಿಲ್ಲಾಧ್ಯಕ್ಷ ಹಫೀಳ್ ಸಅದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಲವು ಕಡೆಗಳಿಂದ ಸಂತ್ರಸ್ತರಿಗೆ ಬಂದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದ್ದು, ಅದನ್ನು ಆದಷ್ಟು ಬೇಗ ತಲಪಿಸುವ ಕಾರ್ಯವನ್ನು ಮಾಡಲಾಗುವದು ಎಂದರು.