ಮಡಿಕೇರಿ, ಆ. 17: ಭಾರತದ 73ನೇ ಸ್ವಾತಂತ್ರ್ಯೋತ್ಸವವನ್ನು ನಾಡಿನಾದ್ಯಂತ ಸರಕಾರಿ ಕಚೇರಿಗಳು, ಶಾಲೆಗಳಲ್ಲಿ, ಸಂಘ-ಸಂಸ್ಥೆಗಳ ವತಿಯಿಂದ ಆಚರಿಸಲಾಗಿದ್ದು, ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ.

ಸುಂಟಿಕೊಪ್ಪ: ಸುಂಟಿಕೊಪ್ಪ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ. ಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಪೌರ ನೌಕರರಾದ ಹೆಚ್.ಆರ್. ರಾಜು ಇತ್ತೀಚೆಗೆ ನಿವೃತ್ತಿ ಹೊಂದಿದ್ದು ಅವರನ್ನೂ ಸನ್ಮಾನಿಸಲಾಯಿತು. ಶಿಕ್ಷಣದಲ್ಲಿ 2018-19 ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ದ್ವಿತೀಯ ಪಿಯುಸಿಯಲ್ಲಿ ಪೂವಮ್ಮ, ಸುಶೀ¯, ಹತ್ತನೇ ತರಗತಿಯಲ್ಲಿ ಜುಲ್ಪಿಕರ್, ಸಂಶೀರ ಇವರುಗಳನ್ನು ಸಮಾರಂಭದ ವೇದಿಕೆಯಲ್ಲಿಯಲ್ಲಿ ಸನ್ಮಾನಿಸಿದರು.

ಸಿದ್ದಾಪುರ: ಸಂತ ಜೋಸೆಫ್ ದೇವಾಲಯದಲ್ಲಿ ರೆ.ಫಾ. ಜೋನಸ್ ಅವರು ಯೋಧರಿಗಾಗಿ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಕ್ತಾದಿಗಳೊಂದಿಗೆ ಆಚರಿಸಲಾಯಿತು.

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮಾಜಿ ಸೈನಿಕರ ಸಂಘ: ಇಲ್ಲಿನ ಮಾಜಿ ಸೈನಿಕರ ಸಂಘದ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ಸಂಘದ ಗೌರವಾಧ್ಯಕ್ಷ ಮೇಜರ್ ಮಂದಣ್ಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇಶಕ್ಕೆ ಈವರೆಗೂ ಪೂರ್ಣ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಕಳೆದ 10 ದಿನಗಳ ಹಿಂದೆ ದೇಶದ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಪೂರ್ಣ ಸ್ವಾತಂತ್ರ್ಯ ಸಿಗುವಂತೆ ಮಾಡಿದ್ದಾರೆ ಎಂದರು.

ಈ ಸಂದರ್ಭ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ, ಉಪಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಆರ್.ಜಿ. ಬಸಪ್ಪ, ಖಜಾಂಚಿ ಸುಕುಮಾರ್, ಲೆಕ್ಕಪರಿಶೋಧಕರಾದ ಎ.ಕೆ. ಮಾಚಯ್ಯ. ಮೋಟಾರ್ ಕೆಲಸಗಾರರ ಸಂಘದ ಅಧ್ಯಕ್ಷ ಭರತ್, ಕಾರ್ಯದರ್ಶಿ ರಂಗಸ್ವಾಮಿ, ಮಾಜಿ ಅಧ್ಯಕ್ಷ ಸಿ.ಸಿ. ನಂದ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಸಾಪದಿಂದ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಚೇರಿ ಮುಂಭಾಗದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು. ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ ಧ್ವಜಾರೋಹಣ ನೆರವೇರಿಸಿದರು. ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಸೇರಿದಂತೆ ಕಸಾಪ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರೋಟರಿ ಸಂಸ್ಥೆಯಿಂದ: ಸ್ವಾತಂತ್ರ್ಯೋತ್ಸವ ಅಂಗವಾಗಿ ರೋಟರಿ ಸೋಮವಾರಪೇಟೆ ಹಿಲ್ಸ್ ವತಿಯಿಂದ ತೋಳೂರು ಶೆಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಲಾಯಿತು.

ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್, ಕಾರ್ಯದರ್ಶಿ ಲೋಕೇಶ್, ಸಹಾಯಕ ಜಿಲ್ಲಾ ರಾಜ್ಯಪಾಲ ಪಿ.ನಾಗೇಶ್, ಮಾಜಿ ಸಹಾಯಕ ರಾಜ್ಯಪಾಲ ಸದಾನಂದ, ನಿಕಟಪೂರ್ವ ಅಧ್ಯಕ್ಷ ಪಿ.ಕೆ. ರವಿ, ಮುಖ್ಯ ಶಿಕ್ಷಕಿ ಚಂದ್ರಮ್ಮ ಮತ್ತಿತರರು ಇದ್ದರು.

ಮೋಟಾರ್ ಯೂನಿಯನ್: ಇಲ್ಲಿನ ವಾಹನ ಚಾಲಕರು ಮತ್ತು ಮಾಲೀಕರ ಸಂಘದಿಂದ ಕಾರು ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ಅಧ್ಯಕ್ಷ ಭರತ್, ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಬಾಲಕೃಷ್ಣ, ಮಾಜಿ ಅಧ್ಯಕ್ಷ ನಂದ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

ಆಟೋ ಯೂನಿಯನ್: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ಮಾಡಲಾಯಿತು. ಸಂಘದ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಗಂಗಾಧರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಎಸ್‍ಎಸ್‍ಎನ್ ಕಟ್ಟಡದಲ್ಲಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕಾಫಿ ಮಂಡಳಿ ಇವರ ಸಹಯೋಗದಲ್ಲಿ ಸಂಘದ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಹಾಗೂ ಸಿಬ್ಬಂದಿಗಳು, ಸಹಕಾರ ಸಂಘದ ಉಪಾಧ್ಯಕ್ಷ ಕೆ.ಜಿ. ಸುರೇಶ್, ಆಡಳಿತ ಮಂಡಳಿ ಸದಸ್ಯರುಗಳು, ಸಂಘದ ವ್ಯವಸ್ಥಾಪಕ ರವೀಂದ್ರ, ಶಾಖಾ ವ್ಯವಸ್ಥಾಪಕರುಗಳಾದ ಜಿ.ಜಿ. ನವೀನ್, ಪೂರ್ಣಿಮಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ನಿವೃತ್ತ ಯೋಧ ತಮ್ಮಯ್ಯ ಕಾರ್ಯಕ್ರಮ ನಿರ್ವಹಿಸಿದರು.

ವಳಗುಂದದಲ್ಲಿ: ಇಲ್ಲಿಗೆ ಸಮೀಪದ ವಳಗುಂದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗ್ರಾಮದ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಅನುಕುಮಾರ್‍ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಬಾಲವಿಕಾಸ ಸಮಿತಿ ಸದಸ್ಯರುಗಳಾದ ಶೈಲಾ ದಿನೇಶ್, ಕುಸುಮ ಬಾಲಕೃಷ್ಣ, ಜ್ಯೋತಿ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಪಲಿತಾ ರಮೇಶ್, ಸಹಾಯಕಿ ಸೋಜಾ, ಯುವಕ ಸಂಘದ ಸದಸ್ಯರುಗಳು ಹಾಗೂ ಮಕ್ಕಳ ಪೋಷಕರು ಹಾಜರಿದ್ದರು. ಹಿರಿಕರ ಅಂಗನವಾಡಿಯಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಮಕ್ಕಳಿಂದ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಯಿತು.

ಸಮಾಪ್ರಾ ಶಾಲೆಯಲ್ಲಿ: ಇಲ್ಲಿನ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಶಾಲ ಧ್ವಜಾರೋಹಣ ನೆರವೇರಿಸಿದರು. ಶಾಲಾ ಪದವೀಧರ ಮುಖ್ಯ ಶಿಕ್ಷಕಿ ಅಣ್ಣಮ್ಮ ದಿನಾಚರಣೆ ಕುರಿತು ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಸಂಸ್ಥೆಯ ಪದಾಧಿಕಾರಿ ಕೆ.ಟಿ. ಚಂದ್ರಕಲಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ, ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಚಾಣಕ್ಯ ಕಾಲೇಜಿನಲ್ಲಿ: ತಾಲೂಕು ಒಕ್ಕಲಿಗರ ಸಂಘದ ಚಾಣಕ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಸ್ಪಂದನ ಟ್ರಸ್ಟ್‍ನ ಅಧ್ಯಕ್ಷ ಹೆಚ್.ಆರ್. ಸುರೇಶ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪ್ರಾಂಶುಪಾಲ ಹೆಚ್.ಬಿ. ಬೆಳ್ಯಪ್ಪ, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

ದೊಡ್ಡಮಳ್ತೆಯಲ್ಲಿ: ಇಲ್ಲಿನ ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ. ದಿವಾಕರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್, ಮುಖ್ಯ ಶಿಕ್ಷಕ ರೇಣುಕಾಸ್ವಾಮಿ ಇದ್ದರು.ಶನಿವಾರಸಂತೆ: ನಿವೃತ್ತ ಸೈನಿಕರ ಸಂಘ ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಅಂಗವಾಗಿ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ ಧ್ವಜಾರೋಹಣ ನೆರವೇರಿಸಿದರು.

ನಂತರ ನಡೆದ ಸಮಾರಂಭದಲ್ಲಿ ಹಿರಿಯ ನಿವೃತ್ತ ಸೈನಿಕ ಕೆ.ವಿ. ಮಂಜುನಾಥ್ ಹಾಗೂ ಅಧ್ಯಕ್ಷ ಧರ್ಮಪ್ಪ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಎಸ್.ಎನ್. ಪಾಂಡು, ನಿರ್ದೇಶಕರಾದ ಕೆ.ಎನ್. ಮಂಜುನಾಥ್, ಕೆ.ಡಿ. ಚಂದ್ರಪ್ಪ, ಎಂ.ಕೆ. ಗಿರೀಶ್, ಕೆ.ಪಿ. ತಿಮ್ಮಯ್ಯ, ಕೆ.ಎಂ. ಪುಟ್ಟಸ್ವಾಮಿ, ಗಂಗಾಧರ್, ಬಿ.ಆರ್. ಅನಂತ್ ಹಾಗೂ ಸದಸ್ಯರು ಹಾಜರಿದ್ದರು.

ಮಡಿಕೇರಿ: 73ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮಡಿಕೇರಿ ಆಶ್ರಯದಲ್ಲಿ ಸಮಿತಿಯ ಅಧ್ಯಕ್ಷ ಅಂಬಿ ಕಾರ್ಯಪ್ಪ ಧ್ವಜಾರೋಹಣ ನೆರವೇರಿಸಿದರು. ನಿರ್ದೇಶಕರುಗಳಾದ ಕಾಂಗೀರ ಸತೀಶ್, ವಾಂಚಿರ ಜಯ ನಂಜಪ್ಪ, ಬೆಪ್ಪುರನ ಮೇದಪ್ಪ, ಆಯಪಂಡ ತಮ್ಮಯ್ಯ ಹಾಗೂ ಸಮಿತಿಯ ಕಾರ್ಯದರ್ಶಿ ಎನ್. ಗೋಪಾಲ ರೆಡ್ಡಿ ಹಾಗೂ ಲೆಕ್ಕಿಗ ಹೆಚ್.ಸಿ. ಚೆಲುವರಾಜು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಮಡಿಕೇರಿ: ಮಡಿಕೇರಿಯ ಎಲ್.ಐ.ಸಿ. ಕಚೇರಿಯಲ್ಲಿ ಶಾಖಾ ವ್ಯವಸ್ಥಾಪಕ ಅರುಳ್ ಸೆಲ್ವಿ ಧ್ವಜಾರೋಹಣದೊಂದಿಗೆ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಹ್ಯಾಂಡ್ ಪೋಸ್ಟ್‍ನ ಮಸ್ಜದುನ್ನೂರ್ ಆವರಣದಲ್ಲಿ ಎಸ್.ಕೆ.ಎಸ್.ಎಸ್.ಎಫ್. ಮತ್ತು ಎಸ್.ವೈ.ಎಸ್. ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಅಂಗವಾಗಿ ಗೌರವ ಅಧ್ಯಕ್ಷ ಬಿ.ಐ. ಮೊಹಮ್ಮದ್ ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ಸಿದ್ದೀಕ್ ಹಾಜಿ, ಇಬ್ರಾಹಿಂ, ಮಲ್ಲಲ್ಲಿ ಝಹೀರ್ ಇತರರು ಹಾಜರಿದ್ದರು.

ಸೋಮವಾರಪೇಟೆ: ಕ್ರಾಂತಿಕಾರಕ ಕ್ರಮಗಳ ಮೂಲಕ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರ ದೇಶದ ಏಕತೆಯ ವಿಚಾರದಲ್ಲಿ ಬದ್ಧತೆಯನ್ನು ಎತ್ತಿ ಹಿಡಿದಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 73ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಡಿ.ಎಸ್. ಪೊನ್ನಪ್ಪ, ಪ್ರಭಾರ ಪ್ರಾಂಶುಪಾಲರಾದ ಹೆಚ್.ಕೆ. ಉಮೇಶ್‍ಕುಮಾರ್, ಪ್ರೌಢಶಾಲಾ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕ ಎಂ.ಎಂ. ಯಶ್ವಂತ್ ಕುಮಾರ್, ಉಪನ್ಯಾಸಕರು, ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚೆಟ್ಟಳ್ಳಿ: ಚೆಟ್ಟಳ್ಳಿ ಆರೋಗ್ಯ ಕೇಂದ್ರದಲ್ಲಿ ಧ್ಜಜಾರೋಹಣ ಮಾಡುವ ಮೂಲಕ 73ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ವೈದ್ಯರಾದ ಡಾ. ಯಶೋದ ಅವರು ಧ್ವಜಾರೋಹಣ ಮಾಡಿ ಬ್ರಿಟಿಷರ ಆಡಳಿತ ತೊಲಗಿಸಿದ ಪರಿಣಾಮ ಭಾರತಕ್ಕೆ ಸ್ವಾತಂತ್ರ್ಯವಾಯಿತು ಎಂದರು. ಈ ಸಂದರ್ಭ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.ನಾಪೆÇೀಕ್ಲು: ಜಿಲ್ಲೆಯ ಉಂಟಾದ ಪ್ರಕೃತಿ ವಿಕೋಪದ ಹಿನ್ನಲೆ 73ನೇ ಸ್ವಾತಂತ್ರ್ಯೋತ್ಸವವನ್ನು ನಾಪೆÇೀಕ್ಲು ವ್ಯಾಪ್ತಿಯಲ್ಲಿ ಸರಳವಾಗಿ ಆಚರಿಸಲಾಯಿತು.

ಎಲ್ಲಾ ಶಾಲಾ ಕಾಲೇಜುಗಳು, ಸಂಘ-ಸಂಸ್ಥೆಗಳಲ್ಲಿ ಅದರ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿದರು.

* ನಾಪೆÇೀಕ್ಲು ವಾಹನ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಾಜಿ ಸೈನಿಕರ ಸಂಘದ ಕೊಂಡಿರ ನಾಣಯ್ಯ ನೆರವೇರಿಸಿದರು.

* ಸಮೀಪದ ಕುಂಜಿಲ ಗ್ರಾಮದ ಅಮ್ಮಂಗೇರಿ ಅಂಗನವಾಡಿ ಕೇಂದ್ರದಲ್ಲಿ ಕಣಿಯಂಡ ನಾಣಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಪೆÇಂಗೇರ ಉಲ್ಲಾಸ, ಕೊಲೆಯಂಡ ಗಣಪತಿ, ಬೊಳ್ಳನಮ್ಮಂಡ ಪೆÇನ್ನಪ್ಪ, ಅಂಗನವಾಡಿ ಕಾರ್ಯಕರ್ತೆ ನಳಿನಿ, ಸಹಾಯಕಿ ಪಲ್ಲವಿ, ಗ್ರಾಮಸ್ಥರು ಇದ್ದರು.

* ನಾಪೆÇೀಕ್ಲು ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅರೆಯಡ ಡಿ. ಸೋಮಪ್ಪ ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಜಾಲಿ ಬೋಪಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಶಾಲಾ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಅಪ್ಪಾರಂಡ ಅಪ್ಪಯ್ಯ, ಪ್ರಾಂಶುಪಾಲೆ ಬಿ.ಎಂ. ಶಾರದ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು.

* ನಾಪೆÇೀಕ್ಲು ಸಮೀಪದ ಇಂದಿರಾನಗರದ ಅಂಗನವಾಡಿ ಬಳಿಯಲ್ಲಿ ಪಿ.ಎಂ. ರಶೀದ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಇದ್ದರು.ಗೋಣಿಕೊಪ್ಪ ವರದಿ: ಕೊಡಗು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಸ್ಥಾನೀಯ ಸಮಿತಿ ವತಿಯಿಂದ ಗೋಣಿಕೊಪ್ಪಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಸುನಿಲ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇಟ್ಟೀರ ಬಿದ್ದಪ್ಪ ಪಾಲ್ಗೊಂಡರು.

* ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಟ್ರಸ್ಟ್ ಗೋಣಿಕೊಪ್ಪ ವತಿಯಿಂದ ಲಯನ್ಸ್ ನರ್ಸರಿ ಹಾಗೂ ಪ್ರೈಮರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಕ್ಲಬ್ ಅಧ್ಯಕ್ಷ ನಿತಿ ಪೊಣಚ್ಚ ಧ್ವಜಾರೋಹಣ ನೆರವೇರಿಸಿದರು. ಲಯನ್ಸ್ ಶಾಲಾ ವಿದ್ಯಾರ್ಥಿಗಳು, ಬೋಧಕ ವರ್ಗ ಲಯನ್ಸ್ ಕ್ಲಬ್ ಹಾಗೂ ಟ್ರಸ್ಟ್ ಸದಸ್ಯರು ಇದ್ದರು.

* ಕಾವೇರಿ ಕಾಲೇಜುವಿನಲ್ಲಿ 73ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ಕೆ.ವಿ. ಕುಸುಮಾಧರ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಮಾಜಿ ಯೋಧ ಕೆ. ಸುಧಾಕರ್, ಎನ್‍ಎಸ್‍ಎಸ್ ಆಧಿಕಾರಿ ಎನ್.ಪಿ. ರೀತ, ಎನ್‍ಸಿಸಿ ಅಧಿಕಾರಿಗಳಾದ ಎಂ.ಆರ್. ಅಕ್ರಂ, ಐ.ಡಿ. ಲೇಪಾಕ್ಷಿ ಹಾಗೂ ರೇಜಂರ್ಸ್ ಅಧಿಕಾರಿ ಎಂ.ಸಿ. ಸೀಮಾ ಇದ್ದರು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಾಯಮುಡಿ ಗ್ರಾಮದ ಮುಖ್ಯ ರಸ್ತೆಯ ಬದಿಗಳಲ್ಲಿರುವ ಮನೆಗಳಲ್ಲಿ ಧ್ವಜಾರೋಹಣ ನಡೆಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಮಾನಿಲ್ ಅಯ್ಯಪ್ಪ ಯುವಕ ಸಂಘ ಸಹಯೋಗದಲ್ಲಿ ಮನೆಗಳಲ್ಲಿ ಧ್ವಜಾರೋಹಣ ನಡೆಯಿತು.

ಕಾಫಿ ಬೆಳೆಗಾರ ಕೊಡಂದೇರ ಎಂ. ತಿಮ್ಮಯ್ಯ ಅವರು ಮಾನಿಲ್ ಅಯ್ಯಪ್ಪ ಯುವಕ ಸಂಘದ ಆವರಣದಲ್ಲಿ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಳಪಂಡ ಟಿಪ್ಪು ಬಿದ್ದಪ್ಪ ಅವರು ಸ್ವಚ್ಛ ಭಾರತ್ ಶ್ರಮದಾನ ಉದ್ಘಾಟಿಸಿದರು. ತೀತರಮಾಡ ಪಿ. ಜಗದೀಶ್ ಅವರಿಂದ ರಕ್ಷಾಬಂಧನ ವಿತರಿಸಿದರು.

* ಪೊನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸಾಮಥ್ರ್ಯ ಸೌಧದ ಸಿಬ್ಬಂದಿ ಇದ್ದರು.

* ಕುರ್ಚಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಜ್ಜಮಾಡ ಸುಬಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

* ಚಿಕ್ಕಮುಂಡೂರು ಧವಸ ಭಂಡಾರ ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಿರಿಯರಾದ ಕಳ್ಳಿಚಂಡ ಬೋಪಯ್ಯ ಹಾಗೂ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಐನಂಡ ಕೆ. ಮಂದಣ್ಣ ಧ್ವಜಾರೋಹಣ ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಂದಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಚಿಕ್ಕಮುಂಡೂರು ಗ್ರಾಮದ ಮಲ್ಚೀರ ಚಂಗಪ್ಪ, ಮುಂಡುಮಡ ದೇವಯ್ಯ, ಹಾಗೂ ಮುಂಡುಮಡ ಗಣಪತಿ ಪಾಲ್ಗೊಂಡಿದ್ದು ಊರಿನ ಹಿರಿಮೆಯಾಗಿರುತ್ತದೆ. ಸೇನೆಗೆ ಚಿಕ್ಕಮುಂಡೂರು ಗ್ರಾಮದಿಂದ ಉತ್ತಮ ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲಿ ಊರಿನ ಯುವಶಕ್ತಿ ಸೇನೆಗೆ ಸೇರಿ ರಾಷ್ಟ್ರ ರಕ್ಷಣೆಗೆ ಕೈ ಜೋಡಿಸುವಂತೆ ಪೆÇೀಷಕರಲ್ಲಿ ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಳ್ಳಿಚಂಡ ಬೋಪಯ್ಯನವರು ಮಾತನಾಡುತ್ತಾ, ಜಮ್ಮು ಕಾಶ್ಮೀರದಲ್ಲಿ 370 ನೇಯ ನಿಯಮ ಕಾಯ್ದೆಯನ್ನು ರದ್ದುಗೊಳಿಸಿ, ದೇಶಕ್ಕೆ ಒಂದೇ ಧ್ವಜ, ಒಂದೇ ಕಾನೂನು ಎಂದು ಜಮ್ಮು- ಕಾಶ್ಮೀರಕ್ಕೆ ಮತ್ತೊಮ್ಮೆ ಸ್ವಾತಂತ್ರ್ಯವನ್ನು ನೀಡಿರುವದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧವಸ ಭಂಡಾರದ ಅಧ್ಯಕ್ಷ ಮುಂಡುಮಡ ಗಣೇಶ್ ವಹಿಸಿದ್ದರು. ಪ್ರಾರ್ಥನೆ ನಿವೃತ ಶಿಕ್ಷಕಿ ಚಿಮ್ಮಣಮಡ ಬೇಬಿ ರವರಿಂದ, ಸ್ವಾಗತ, ನಿರೂಪಣೆ ಮತ್ತು ವಂದನಾರ್ಪಣೆಯನ್ನು ಅಜ್ಜಿಕುಟೀರ ಶಾಂತಿ ಮೊಣ್ಣಪ್ಪರವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯಾಧಿಕಾರಿ ಚಿಮ್ಮಣಮಡ ಸೋಮಯ್ಯ, ಗ್ರಾ.ಪಂ. ಸದಸ್ಯ ಪ್ರೀತಮ್ ಪೆÇನ್ನಪ್ಪ, ಧವಸ ಭಂಡಾರದ ಮಾಜಿ ಅಧ್ಯಕ್ಷ ಅಜ್ಜಿಕುಟೀರ ಅಚ್ಚಯ್ಯ, ಡಾಲಾ ಮೊಣ್ಣಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಕಳ್ಳಿಚಂಡ ಉಮೇಶ್ ಗುತ್ತಿದಾರರ ಸಂಘದ ಅಧ್ಯಕ್ಷ ಚಿಮ್ಮಣಮಡ ವಾಸು ಉತ್ತಪ್ಪ, ಚಿಮ್ಮಣ್ಣಮಾಡ ನಂಜಪ್ಪ , ಮಾಜಿ ಸೈನಿಕ ಐನಂಡ. ಬೇಬಿ ತಮ್ಮಯ್ಯ ಅಜ್ಜಿಕುಟ್ಟೀರ ಸೋಮಯ್ಯ, ಮುಂಡುಮಡ ರಾಮು ಉತ್ತಪ್ಪ, ಬ್ಯಾಂಕಿನ ಮಾಜಿ ವ್ಯವಸ್ಥಾಪಕ ಕಳ್ಳಿಚಂಡ ಪೆÇನ್ನಪ್ಪ ಇದ್ದರು.

ಮಡಿಕೇರಿ: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 73ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಅಧ್ಯಕ್ಷ ಸಿ.ಕೆ. ಬಾಲಕೃಷ್ಣ ಧ್ವಜಾರೋಹಣ ನೆರವೇರಿಸಿದರು. ಮಾಜಿ ಅಧ್ಯಕ್ಷ ಬಿ.ಕೆ. ಜಗದೀಶ್ ದಿನದ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಬ್ಯಾಂಕಿನ ಉಪಾಧ್ಯಕ್ಷ ಬಿ.ಎಂ. ರಾಜೇಶ್ ಹಾಗೂ ನಿರ್ದೇಶಕರುಗಾಳಾದ ಕೋಡಿ ಚಂದ್ರಶೇಖರ್, ಎಸ್.ಸಿ. ಸತೀಶ್, ಕಾವೇರಮ್ಮ ಸೋಮಣ್ಣ, ಕನ್ನಂಡ ಎ. ಸಂಪತ್, ಬಿ.ಪಿ. ಮಾಚಮ್ಮ, ಆರ್. ಗಿರೀಶ್, ಬಿ.ವಿ. ರೋಷನ್, ಕೆ.ಆರ್. ನಾಗೇಶ್, ವ್ಯವಸ್ಥಾಪಕ ಕೆ. ಪದ್ಮನಾಭ ಕಿಣಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.