ಭಾಗಮಂಡಲ, ಆ. 17: ದೇಶದ ಜೀವನದಿಯ ಉಗಮ ಸ್ಥಾನ, ಕೊಡಗಿನ ಪವಿತ್ರ ಕ್ಷೇತ್ರ ತಲಕಾವೇರಿಯ ಜಲ ಮೂಲದ ನೆಲೆಯೆನಿಸಿರುವ ಬ್ರಹ್ಮಗಿರಿ ಬೆಟ್ಟಕ್ಕೇ ಇದೀಗ ಆಪತ್ತು ತಲೆದೋರಿದೆ.ಈ ವರ್ಷದ ಜಲಸ್ಫೋಟದ ಮಳೆಯ ಆರ್ಭಟಕ್ಕೆ ಬೆಟ್ಟದ ಬಹುತೇಕ ಕಡೆ ಬಿರುಕು ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ಅಪಾಯಕಾರಿ ಚಿತ್ರಣ ಮೂಡಿಸುತ್ತದೆ.ಈ ಕುರಿತು “ಶಕ್ತಿ” ಯೊಂದಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈಗಾಗಲೇ ಕೊಡಗಿಗೆ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಆಗಮಿಸಿದ್ದಾರೆ. ವೀರಾಜಪೇಟೆಯ ಅಯ್ಯಪ್ಪ ಬೆಟ್ಟಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ. ಇದೇ ತಂಡದವರನ್ನು ತಲಕಾವೇರಿಗೆ ಕಳುಹಿಸಿ ಬ್ರಹ್ಮಗಿರಿ ಬೆಟ್ಟದಲ್ಲಿ ಪರಿಶೀಲಿಸುವದಾಗಿ ಅವರು ತಿಳಿಸಿದರು. ಈ ಬಗ್ಗೆ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಮಾರುತಿ ಅವರನ್ನು ಸಂಪರ್ಕಿಸಿದಾಗ ವಿಜ್ಞಾನಿ ಸÀುನಂದನ್ ಅವರ ತಂಡವನ್ನು ಇಲಾಖೆಯಿಂದ ಜಿಲ್ಲೆಗೆ ಕಳುಹಿಸಿದ್ದು ಜಿಲ್ಲಾಧಿಕಾರಿಯವರ ಸಹಕಾರದೊಂದಿಗೆ ಬ್ರಹ್ಮಗಿರಿಗೆ ತೆರಳಿ ಇದೇ ತಂಡ ಪರಿಶೀಲಿಸುವದಾಗಿ ನುಡಿದರು. ಈ ತಂಡವು ಕೋರಂಗಾಲ ದುರಂತದ ಪ್ರದೇಶಕ್ಕೂ ತೆರಳಲಿದ್ದು ಅದೇ ದಿನ ಬ್ರಹ್ಮಗಿರಿಯನ್ನೂ ವೀಕ್ಷಿಸುವದಾಗಿ ಮಾಹಿತಿಯಿತ್ತರು. ಶಾಸಕ ಕೆ.ಜಿ. ಬೋಪಯ್ಯ ಅವರು ಕೂಡ ಭಾನುವಾರ ತೆರಳಿ ವೀಕ್ಷಿಸುವದಾಗಿ ಹೇಳಿದ್ದಾರೆ.

ಭಾಗಮಂಡಲ ಸಾರ್ವಜನಿಕರ ಅಭಿಪ್ರಾಯದಂತೆ 2014 ರಲ್ಲಿ ಅರಣ್ಯ ಇಲಾಖೆಯಿಂದ ಬ್ರಹ್ಮಗಿರಿ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ಅಲ್ಲಲ್ಲಿ ತೆಗೆಯಲಾಯಿತು. ಅಲ್ಲದೆ ಅರಣ್ಯ ಸಸಿಗಳನ್ನೂ ನೆಡಲಾಯಿತು. ಅರಣ್ಯತೋಪು ಮತ್ತು ಇಂಗು ಗುಂಡಿಗಳ ಸಲುವಾಗಿ ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಲಾಯಿತು. ಇದೇ ರೀತಿಯ ಕಾರ್ಯ 2016 ರವರೆಗೂ ಮುಂದುವರೆಯಿತು. ಬ್ರಹ್ಮಗಿರಿ ಬೆಟ್ಟದಲ್ಲಿ ಈ ಯಂತ್ರಗಳನ್ನು ಬಳಸಿದ ಹಿನ್ನೆಲೆಯಲ್ಲಿ ನೆಲದ ಮಣ್ಣ್ಣಿನ ಪದರ ಸಡಿಲಗೊಂಡು ಈಗಿನ ಮಳೆಯ ಸಂದರ್ಭ ಬೆಟ್ಟ ಬಿರುಕು ಬಿಟ್ಟು ಈ ದುರಂತಕ್ಕೆ ಕಾರಣವಾಗಿದೆ ಎನ್ನುವದು ಸ್ಥಳೀಯರ ಅನಿಸಿಕೆಯಾಗಿದೆ.

ಸಾರ್ವಜನಿಕರ ಈ ಅಭಿಪ್ರಾಯದ ಕುರಿತು ಪ್ರತಿಕ್ರಿಯೆ ಬಯಸಿದಾಗ ಈಗಷ್ಟೇ ವರ್ಗಾವಣೆಗೊಂಡಿರುವ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಮುಕ್ತ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದರು:-2014 ರಲ್ಲಿ ”ಕಾವೇರಿ ಹಿತರಕ್ಷಣಾ ಸಮಿತಿ” ಪದಾಧಿಕಾರಿಗಳು ದೇಶದ ಪ್ರಧಾನಿ ಹಾಗೂ ಪರಿಸರ ಸಚಿವರಿಗೆ ಪತ್ರಗಳನ್ನು ಬರೆದು ಬ್ರಹ್ಮಗಿರಿ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ತೆಗೆದು ನೀರು ಸಂರಕ್ಷಣೆ ಮಾಡಬೇಕು ಹಾಗೂ ನೆಡುತೋಪನ್ನು ಬೆಳೆಸಬೇಕು ಎಂದು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸರಕಾರದ ನಿರ್ದೇಶನದ ಮೇರೆÀಗೆ ರಾಜ್ಯದ ಆಗಿನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯವರು ಜಿಲ್ಲೆಯ ಅರÀಣ್ಯಾಧಿಕಾರಿಗಳಿಗೆ ಸೂಚನೆಯಿತ್ತು ಬ್ರಹ್ಮಗಿರಿ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ತೆರೆಯ ಲಾಯಿತು. ಅರಣ್ಯ ನೆಡುತೋಪು ಬೆಳೆಸಲಾಯಿತು. 2016 ರವರೆಗೂ ಈ ಕೆಲಸ ಮುಂದುವರಿಯಿತು. ಇದರಿಂದಲೇ ಬೆಟ್ಟ ಬಿರುಕು ಬಿಟ್ಟುದು ಎನ್ನುವದಾದರೆ, 2007 ರಲ್ಲಿಯೂ ಬೆಟ್ಟದಲ್ಲಿ ಬಿರುಕು ಕಾಣಿಸಿ ಕೊಂಡಿದ್ದು ಅದಕ್ಕೆ ಕಾರಣವೇನು?

(ಮೊದಲ ಪುಟದಿಂದ) ತಲಕಾವೇರಿ ರಸ್ತೆಯಲ್ಲಿ ಆಗಿಂದಾಗ್ಗೆ ಬರೆಗಳು ಕುಸಿಯತ್ತಿರುವ ಸಂದರ್ಭಗಳಲ್ಲೆಲ್ಲ ಯಂತ್ರಗಳನ್ನು ತರಿಸಿ ಮಣ್ಣನ್ನು ಎಳೆದು ದುರಸ್ತಿಪಡಿಸಲಾಗುತ್ತಿದÉ. ಇದರಿಂದಾಗಿ ಬೆಟ್ಟದಲ್ಲ್ಲಿ ಬಹುತೇಕ ರಸ್ತೆ ಬದಿಗೆ ಸಂಬಂಧಿಸಿದ ಭಾಗಗಳಲ್ಲಿಯೇ ಬಿರುಕುಂಟಾಗುತ್ತಿದೆ. ಅಲ್ಲದೆ, ಈ ವರ್ಷ ಪ್ರಾರಂಭದಲ್ಲಿ ಮಳೆಯೇ ಇಲ್ಲದಿದ್ದು ದಿಢೀರ್ ಆಗಿ ಆಗಸ್ಟ್‍ನಲ್ಲಿ ಜಲಸ್ಫೋಟದಂತೆ ಒಮ್ಮಿಂದೊಮ್ಮೆಲೇ ಮಳೆಯಾದುದರಿಂದಲೂ ಬಿರುಕು ಮೂಡಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಬ್ರಹ್ಮಕ್ಷೇತ್ರ : ಇದೀಗ ಕೊಡಗಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಜೀವನದಿಯ ಮೂಲ ತಾಣದಲ್ಲಿಯೇ ಅಪಾಯಕಾರಿ ಬಿರುಕು ತಲೆದೋರಿರುವದು ಭಕ್ತಾದಿಗಳ, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಬ್ರಹ್ಮಗಿರಿಯ ಪೌರಾಣಿಕ ಹಿನ್ನೆಲೆಯನ್ನು ಈ ಸಂದರ್ಭ ಅವಲೋಕಿಸಬೇಕಾಗಿದೆ. ಕೊಡಗು ಜಿಲ್ಲೆÉ “ಬ್ರಹ್ಮಕ್ಷೇತ್ರ” ಎಂದು ಕರೆಸಿಕೊಂಡಿದೆ. ಮುನಿ ಕವೇರ ಆ ಬೆಟ್ಟದಲ್ಲಿ ತಪಗೈದುದರಿಂದ ಹಾಗೂ ಆವರಿಗೆ ಬ್ರಹ್ಮದೇವÀ ಒಲಿದು ಲೋಪಾಮುದ್ರೆÀ್ರ ಎಂಬ ಕನ್ನಿಕೆಯನ್ನು ನೀಡಿದುದರಿಂದ ಬ್ರಹ್ಮಕ್ಷೇತ್ರ ಎಂದು ಕರೆಸಿಕೊಂಡಿತು. ಆಕೆಯನ್ನು ಕವೇರ ಮುನಿ ಪುತ್ರಿಯಾಗಿ ಸ್ವೀಕರಿಸಿದುದರಿಂದ ಕಾವೇರಿ ಎಂಬ ಹೆಸರು ಅನ್ವರ್ಥವಾಯಿತು. ಉತ್ತರದಿಂದ ದಕ್ಷಿಣಕ್ಕೆ ಪದಾರ್ಪಣೆಗೈದ ಅಗಸ್ತ್ಯ ಮುನಿಗಳು ಇದೇ ಬ್ರಹ್ಮಗಿರಿಯಲ್ಲಿ ಕಾವೇರಿಯನ್ನು ಸಂಧಿಸಿದ್ದು ದಂಪತಿಗಳಾಗಲು ಪ್ರೇರಣೆ ನೀಡಿದ ಪ್ರದೇಶವಾಗಿದೆ. ಬಳಿಕ ಕಾವೇರಿಯು ತನ್ನ ಅರ್ಧ ಶಕ್ತಿಯಲ್ಲಿ ಲೋಕಪಾವನೆಯಾಗಿ ನದಿಯಾಗಿ ಹರಿದರೆ ಇನ್ನರ್ಧ ಶಕ್ತಿಯಿಂದ ಅಗಸ್ತ್ಯರ ಮಡದಿಯಾಗಿ ಉಳಿದುದು ಪೌರಾಣಿಕ ಕಥೆಯಾಗಿದೆ. ಇಂತಹ ಪವಿತ್ರ ಬೆಟ್ಟದಲ್ಲಿ ಸಪ್ತ ಋಷಿಗಳ ಮಂಡಲವಿದ್ದು ಸಪ್ತ ಋಷಿಗಳು ಕೂಡ ಅಲ್ಲಿ ತಂಗಿದ್ದ ಕೇಂದ್ರವಾಗಿದೆ.

ಬ್ರಹ್ಮಗಿರಿಯು ಭಕ್ತಾದಿಗಳು ನಮನ ಸಲ್ಲಿಸುವ ಮಹತ್ವದಗಿರಿ ಪ್ರದೇಶವಾಗಿರುವದರೊಂದಿಗೆ ಕಾವೇರಿ ಕುಂಡಿಕೆಗೆ ಜಲ ಮೂಲವನ್ನು ಹರಿಸುವಂತಹ ತಾಣವೂ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ಇದನ್ನು ಆದ್ಯತೆಯಲ್ಲಿ ಪರಿಗÀಣಿಸಿ ಬ್ರಹ್ಮಗಿರಿಯನ್ನು ಉಳಿಸುವಂತಹ ಕಾರ್ಯದತ್ತ ವಿಶೇಷÀ ಗಮನ ಹರಿಸಬೇಕಾಗಿದೆ ಎಂಬದು ಸ್ಥಳೀಯರ ಆಗ್ರಹವಾಗಿದೆ.