ಕುಶಾಲನಗರ, ಆ. 16: ಕುಶಾಲನಗರದ ಕೊಪ್ಪ ಗೇಟ್ ಬಳಿಯಿರುವ ಕಾವೇರಿ ದೇಗುಲದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಹುಣ್ಣಿಮೆ ಪೂಜಾ ಕಾರ್ಯಕ್ರಮವು ಜರುಗಿತು. ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಲಾಯಿತು. ಎಸ್‍ಎಲ್‍ಎನ್ ಸಂಸ್ಥೆಯ ಮಾಲೀಕರಾದ ಸಾತಪ್ಪನ್, ವಿಶ್ವನಾಥನ್, ಬಾರವಿ ಕನ್ನಡ ಅಭಿಮಾನಿ ಸಂಘದ ಪ್ರಮುಖರಾದ ಬಬಿಂದ್ರ ಪ್ರಸಾದ್. ವಿಜಯೇಂದ್ರ ಪ್ರಸಾದ್ ಮತ್ತಿತರರು ಇದ್ದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.