ಗೋಣಿಕೊಪ್ಪ ವರದಿ, ಆ. 16 : ಪಟ್ಟಣದ ಸುತ್ತಮುತ್ತಲಿನ ಗ್ರಾಮದಲ್ಲಿ ನಿರಂತರ ಜಾನುವಾರು ಕಳವು ನಡೆಯುತ್ತಿದ್ದು, ಕಳ್ಳರನ್ನು ಬಂಧಿಸುವಂತೆ ಸ್ಥಳೀಯ ಹಿಂದೂಪರ ಸಂಘಟನೆಗಳ ಪ್ರಮುಖರು ಗೋಣಿಕೊಪ್ಪ ಪೊಲೀಸ್ ಉಪ ನಿರೀಕ್ಷಕ ಶ್ರೀಧರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಹಾತೂರು, ಕೈಕೇರಿ, ಅತ್ತೂರು, ಅರ್ವತೊಕ್ಲು ಭಾಗಗಳಲ್ಲಿ ನಿರಂತರವಾಗಿ ಜಾನುವಾರುಗಳು ಕಳವು ನಡೆಯುತ್ತಿದೆ. ಕೃಷಿಕರು ಸಾಕಿರುವ ಎಮ್ಮೆ, ಕೋಣ, ಎತ್ತು, ಹಾಲು ಕರೆಯುವ ಹಸುಗಳನ್ನು ಕೊಟ್ಟಿಗೆಯಿಂದ ರಾತೋರಾತ್ರಿ ಕದ್ದು ಸಾಗಿಸುತ್ತಿರುವದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸುಮಾರು 10-15 ಕ್ಕೂ ಹೆಚ್ಚು ಜಾನುವಾರುಗಳು ಹಲವು ದಿನಗಳಿಂದ ಕಳವಾಗಿವೆ. ಇದನ್ನು ತಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ಆರ್‍ಎಸ್‍ಎಸ್ ಮುಖಂಡ ಚೆಕ್ಕೇರ ಮನು ಕಾವೇರಪ್ಪ ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ.