ಮಡಿಕೇರಿ, ಆ. 16: ತಾ.17ರಂದು (ಇಂದು) ಡಾ.ಹೆಚ್.ಸಿ ಮಹದೇವಪ್ಪ, ಮಾಜಿ ಲೋಕೋಪಯೋಗಿ ಸಚಿವ ನೇತೃತ್ವದಲ್ಲಿ ಮಾಜಿ ಸಂಸದರು, ಮಾಜಿ ಶಾಸಕರು, ಹಾಲಿ ಶಾಸಕರನ್ನು ಒಳಗೊಂಡ ನಿಯೋಗವು ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಸ್ಥಳ ಮತ್ತು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವರು.

ಬೆಳಿಗ್ಗೆ 9.30 ಗಂಟೆಗೆ ಕುಶಾಲನಗರಕ್ಕೆ ಆಗಮಿಸಿ, ಕುಶಾಲನಗರದಲ್ಲಿ ಹಾನಿಯಾದ ಸ್ಥಳ ಮತ್ತು ಪರಿಹಾರ ಕೇಂದ್ರಕ್ಕೆ ಭೇಟಿ ನೀಡುವರು, ಮುಂದುವರೆದು ವಾಲ್ನೂರು ಪರಿಹಾರ ಕೇಂದ್ರ, ನೆಲ್ಲಿಹುದಿಕೇರಿ, ಸಿದ್ದಾಪುರ, ಕೊಟ್ಟಮುಡಿ, ಪೈಸಾರಿ, ಬೇತ್ರಿ, ಕೊಟ್ಟಮುಡಿ, ನಾಪೋಕು, ಭಾಗಮಂಡಲದ ಕೋರಂಗಾಲಕ್ಕೆ ಭೇಟಿ ನೀಡಿ ಪರಿಶೀಲಿಸುವರು.

ಸಂಜೆ 4.30ಕ್ಕೆ ಮಡಿಕೇರಿಯ ಹೋಟೆಲ್ ವ್ಯಾಲಿವ್ಯೂನಲ್ಲಿ ಪತ್ರಿಕಾಗೋಷ್ಠಿ ನಡೆಸುವರು. ಇವರ ಭೇಟಿಯ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ನಿಯೋಗದಲ್ಲಿ “ಕೆಪಿಸಿಸಿ ನೆರೆ ಹಾನಿ ವೀಕ್ಷಣೆ ತಂಡ”ದ ಡಾ.ಹೆಚ್.ಸಿ ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಟ್, ಧ್ರುವನಾರಾಯಣ, ವೀಣಾ ಅಚ್ಚಯ್ಯ ಮತ್ತು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ ಮಂಜುನಾಥ್ ಕುಮಾರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಾಣ ಸಂಚಾಲಕ ಸೂರಜ್ ಹೊಸೂರು ತಿಳಿಸಿದ್ದಾರೆ.