ಚೆಟ್ಟಳ್ಳಿ, ಆ. 16: ಮಳೆಗಾಲ ಪ್ರಾರಂಭವಾದೊಡನೆ ಪ್ರವಾಸಿಗರು ಜಲಕ್ರೀಡೆಯಲ್ಲಿ ತೊಡಗಲು ಜಿಲ್ಲೆಗೆ ಆಗಮಿಸುತ್ತಾರೆ. ಕಳೆದೆರಡು ವರ್ಷಗಳಲ್ಲಿ ಕಾನೂನಿನ ತೊಡಕಿನಿಂದ ನಿಂತು ಹೋಗಿದ್ದ ರ್ಯಾಫ್ಟಿüಂಗ್ ಕ್ರೀಡೆಗೆ ಜಿಲ್ಲಾಡಳಿತ ಹಲವು ನಿಯಮದೊಂದಿಗೆ ದುಬಾರೆ ಹಾಗೂ ಬರಪೊಳೆ (ಕೆಕೆಆರ್)ನಲ್ಲಿ ರ್ಯಾಫ್ಟಿಂಗ್ ಪುನರಾರಂಭಗೊಳಿಸಿತು.

ಆದರೆ ಕಳೆದೆರಡು ವಾರಗಳಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆ ಹಾಗೂ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾದಂತೆ ರ್ಯಾಫ್ಟಿಂಗ್ ಬುಕ್ಕಿಂಗನ್ನು ರದ್ದುಪಡಿಸಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಸಹಕರಿಸಲು ಮನವಿ : ಕೊಡಗಿನಲ್ಲಿ ಮಳೆಯಿಂದಾಗಿ ಅನಾಹುತವಾದರೆ ದುಬಾರೆ ಹಾಗೂ ಬರಪೊಳೆಯ ರ್ಯಾಫ್ಟಿಂಗ್ ತಂಡ ಅನಾಹುತ ಸ್ಥಳಗಳಿಗೆ ತಕ್ಷಣವೆ ಸ್ಪಂಧಿಸಿ ಜನರ ರಕ್ಷಣೆಗೆ ಮುಂದಾಗಬೇಕೆಂದು ಜಿಲ್ಲಾಡಳಿತ ಮನವಿ ಮಾಡಿತ್ತು. ಅದರಂತೆ ದುಬಾರೆ ಹಾಗೂ ಬರಪೊಳೆಯ ರ್ಯಾಫ್ಟಿಂಗ್ ತಂಡ ಹಾಗೂ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ತಂಡದವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಚಿಸಿದ ಸ್ಥಳಗಳಿಗೆ ರ್ಯಾಫ್ಟ್ ಹಾಗೂ ರಕ್ಷಣೆಯ ಸಾಮಗ್ರಿಯೊಂದಿಗೆ ತೆರಳಿ ರಕ್ಷಣೆ ಕಾರ್ಯಕ್ಕೆ ಮುಂದಾಗಿ ನೂರಾರು ಜೀವಗಳನ್ನು ರಕ್ಷಿಸಿದರು.

ಜನರ ರಕ್ಷಣೆ, ಸಂತ್ರಸ್ತರ ಸ್ಥಳಾಂತರ, ಶೋಧ ಕಾರ್ಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಸೇವೆಗೆ ರ್ಯಾಫ್ಟಿಂಗ್ ತಂಡಗಳಿಗೆ ಜಿಲ್ಲಾಧಿಕಾರಿ ಅಭಿನಂದಿಸಿದರು. ಮಳೆ ಕಡಿಮೆ ಯಾದಂತೆ ರಕ್ಷಣಾ ಕಾರ್ಯವನ್ನು ಕೊನೆಗೊಳಿಸಿದ ರ್ಯಾಫ್ಟಿಂಗ್ ತಂಡ ಕಳೆದ ನಾಲ್ಕು ದಿನಗಳಿಂದ ದುಬಾರೆ ಹಾಗೂ ಬರಪೊಳೆಗಳಲ್ಲಿ ವಾಟರ್ ರ್ಯಾಫ್ಟಿಂಗ್ ಕ್ರೀಡೆಯನ್ನು ಪುನರ್‍ರಾರಂಭಿಸಿದೆ.

ಪ್ರವಾಸಿಗರ ಕೊರತೆ : ಮಳೆ ಪ್ರಾರಂಭದ ಮೊದಲೇ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲಾಧಿಕಾರಿಗಳು ಹಲವು ಬಾರಿ ರೆಡ್ ಹಾಗೂ ಆರೆಂಜ್ ಅಲರ್ಟ್ ಆದೇಶಿಸÀ ತೊಡಗಿದರು. ನಂತರದಲ್ಲಿ ಆದೇಶಗಳು ಮುಂದುವರೆದ ಫಲವಾಗಿ ಪ್ರವಾಸಿಗರ ಆಗಮ. ಕಡಿಮೆ ಯಾಯಿತು. ಮುಂದೆ ಪ್ರವಾಸಿಗರು ಬರಬಹುದೆಂಬ ನಿರೀಕ್ಷೆಯಲ್ಲಿ ದ್ದೇವೆಂದು ರ್ಯಾಫ್ಟಿಂಗ್ ಮಾಲೀಕರು ಹೇಳುತ್ತಾರೆ.

-ಕರುಣ್ ಕಾಳಯ್ಯ