ಮಡಿಕೇರಿ, ಆ. 16: ಕೊಡಗಿನಲ್ಲಿ ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಿಸಲು ರಾಜ್ಯ ಸರಕಾರ ತಲಾ ರೂ. 10 ಲಕ್ಷವನ್ನು ಘೋಷಿಸಬೇಕು ಮತ್ತು ಕೃಷಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎ.ಕೆ. ಹ್ಯಾರಿಸ್ ಒತ್ತಾಯಿಸಿದ್ದಾರೆ.

ನೆಲ್ಲಿಹುದಿಕೇರಿ, ಸಿದ್ದಾಪುರ, ಗುಹ್ಯ, ಕೊಂಡಂಗೇರಿ, ಚೆರಿಯಪರಂಬು, ಎಮ್ಮೆಮಾಡು, ಬೇತ್ರಿ, ತೋರ, ನಾಪೆÇೀಕ್ಲು, ಕೊಟ್ಟಮುಡಿಗೆ ಹಾಗೂ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಮನೆ ಮತ್ತು ಕೃಷಿ ಭೂಮಿ ಕಳೆದುಕೊಂಡವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಮಾತನಾಡಿದ ಹ್ಯಾರಿಸ್, ಕೊಡಗಿನ ನೆರೆ ಸಂತ್ರಸ್ತರ ಸ್ಥಿತಿ ಶೋಚನೀಯವಾಗಿದ್ದು, ಶಾಶ್ವತ ಪರಿಹಾರಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರಕಾರ ಶೀಘ್ರ ಕೈಗೊಳ್ಳಬೇಕೆಂದು ಆಗ್ರಹಿಸಿದರು.