ಗೋಣಿಕೊಪ್ಪಲು, ಆ. 16: ಜೋಡು ಬೀಟಿ ನಿವಾಸಿಗಳಾದ ಪರಿಶಿಷ್ಟ ಪಂಗಡದ ರಾಜು ಹಾಗೂ ಪುಷ್ಪ ದಂಪತಿಗಳ 2 ತಿಂಗಳ ಹೆಣ್ಣು ಮಗು ದುರ್ವಿದಿಗೆ ಬಲಿಯಾಗಿದ್ದು, ಮಗು ಕಳೆದುಕೊಂಡ ದುಖಃದ ಮಡುವಿನಲ್ಲಿ ಪೆÇೀಷಕರು ರೋಧಿಸುತ್ತಿದ್ದಾರೆ. ಆರೋಗ್ಯ ವ್ಯತ್ಯಯ ಉಂಟಾದ ಮಗುವನ್ನು ಚಿಕಿತ್ಸೆಗೆ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ತುರ್ತಾಗಿ ಚಿಕಿತ್ಸೆ ನೀಡಿದ್ದರೆ ಮಗುವಿನ ಸಾವು ಸಂಭವಿಸುತ್ತಿರಲಿಲ್ಲ. ಮಗುವನ್ನು ಗುರುವಾರ ರಾತ್ರಿ 11 ಗಂಟೆಗೆ ಗೋಣಿಕೊಪ್ಪಲು ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ರಾತ್ರಿ ಪಾಳಿಯ ವೈದ್ಯರು ಕರ್ತವ್ಯದಲ್ಲಿ ಇಲ್ಲದೇ ಇದ್ದುದರಿಂದ ಮಗು ಪ್ರಾಣ ಕಳೆದುಕೊಂಡಿದೆ ಎಂದು ಮೂಕಳೇರ ಮಧು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಮಗುವಿಗೆ ಎರಡು ದಿನಗಳಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿತ್ತು. ಗುರುವಾರ ರಾತ್ರಿ ಜ್ವರ ಹೆಚ್ಚಾಗಿ ಮಗು ಅಳುತ್ತಿದ್ದ ಕಾರಣ ಮಗುವನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲು ಪೆÇೀಷಕರು ಮುಂದಾದರು. ಆದರೆ ರಾತ್ರಿ ಕರ್ತವ್ಯದಲ್ಲಿರಬೇಕಾದ ವೈದ್ಯರು ಗೈರು ಹಾಜರಾದ ಕಾರಣ ಮಗುವಿಗೆ ತಕ್ಷಣ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಆರೋಗ್ಯ ಕೇಂದ್ರದಿಂದ ಮಗುವನ್ನು vIರಾಜಪೇಟೆಯ ಆರೋಗ್ಯ ಕೇಂದ್ರಕ್ಕೆ (ಮೊದಲ ಪುಟದಿಂದ) ಕರೆದುಕೊಂಡು ಹೋಗಿ ಎಂದು ಇಲ್ಲಿನ ದಾದಿಯರು ಪೆÇೀಷಕರಿಗೆ ಸೂಚಿಸಿದರು. ಪರಿಸ್ಥಿತಿ ಗಂಭೀರವಾಗಿದೆ ಎಂದು ಗಾಬರಿಗೊಂಡ ಪೆÇೀಷಕರು ಆಸ್ಪತ್ರೆಯ ಆಂಬ್ಯೂಲೆನ್ಸ್ ಅನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿ ಆಂಬ್ಯೂಲೆನ್ಸ್ ಸೇವೆಯನ್ನು ವೀರಾಜಪೇಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಿದರು. ಸುಮಾರು 12:30 ಗಂಟೆಗೆ ವೀರಾಜಪೇಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದುಕೊಂಡು ಹೋದಾಗ ಅಲ್ಲಿಯೂ ವೈದ್ಯರು ಸಿಗಲಿಲ್ಲ. ಕೆಲ ಸಮಯ ಕಾದ ನಂತರ ವೈದ್ಯರೊಬ್ಬರು ಬಂದು ಮಗುವನ್ನು ಪರೀಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ಎಂದು ಸೂಚಿಸಿ ಅಲ್ಲಿನ ಆಂಬ್ಯೂಲೆನ್ಸ್ ಸೇವೆಯನ್ನು ಒದಗಿಸಿದರು.

ಪೆÇೀಷಕರು ಮಗುವನ್ನು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಮಗುವನ್ನು ಪರೀಕ್ಷಿಸಿ ಮಗುವಿನ ಆರೋಗ್ಯದಲ್ಲಿ ಬಹಳ ವ್ಯತ್ಯಾಸ ಉಂಟಾಗಿದೆ. ತಕ್ಷಣವೇ ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವದು ಒಳಿತು ಎಂದು ವೈದ್ಯರು ಮಡಿಕೇರಿಯಿಂದ ಮೈಸೂರಿನ ಆಸ್ಪತ್ರೆಗೆ ತಲಪಲು ಆಂಬ್ಯೂಲೆನ್ಸ್ ಸೇವೆಯನ್ನು ಒದಗಿಸಿದ್ದಾರೆ. ಆದರೆ ಪ್ರಯಾಣದ ನಡುವೆ ಕುಶಾಲನಗರ ಸಮೀಪದಲ್ಲೇ ಮಗು ಅಸುನೀಗಿದೆ. ಈ ಎಲ್ಲಾ ಗಂಭೀರ ಪರಿಸ್ಥಿತಿಗಳಿಗೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

-ಚಿತ್ರ ವರದಿ : ಎನ್.ಎನ್. ದಿನೇಶ್