ಕರಿಕೆ, ಆ. 16: ಗಾಳಿ ಮಳೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಅಡಿಕೆ ತೋಟಕ್ಕೆ ಹಾನಿಯಾದ ಘಟನೆ ವರದಿಯಾಗಿದೆ.

ಚೆತ್ತುಕಾಯ ಪಚ್ಚೆಪಿಲಾವು ನಿವಾಸಿ ಹೊದ್ದೆಟ್ಟಿ ಕೃಷ್ಣಪ್ಪ ಎಂಬವರ ಅಡಿಕೆ ತೋಟಕ್ಕೆ ಬೃಹತ್ ಗಾತ್ರದ ಎಣ್ಣೆ ಮರವೊಂದು ಉರುಳಿ ಬಿದ್ದ ಪರಿಣಾಮ ಸುಮಾರು ಇಪ್ಪತ್ತು ಫಸಲು ಕೊಡುವ ಅಡಿಕೆ ಮರ ನೆಲಕಚ್ಚಿದ್ದು ಅಂದಾಜು ಹದಿನೈದು ಸಾವಿರ ನಷ್ಟ ಸಂಬವಿಸಿದೆ.