ಮಡಿಕೇರಿ, ಆ. 14: ಇಲ್ಲಿನ ಕೊಹಿನೂರು ರಸ್ತೆ ಜಂಕ್ಷನ್ನಲ್ಲಿ ನಕ್ಷತ್ರ, ಮಿಲನ, ವಜ್ರ, ದೃಷ್ಟಿ, ಸ್ತ್ರೀಶಕ್ತಿ ಸಂಘಗಳ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಚೇಂಬರ್ ಕಾರ್ಯದರ್ಶಿ ಮೋಂತಿಗಣೇಶ್, ಪಟ್ಟಣ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ. ಜಗದೀಶ್, ನಗರಸಭಾ ಮಾಜಿ ಸದಸ್ಯರಾದ ಬಿ.ಕೆ. ಅರುಣ್ ಕುಮಾರ್, ಸತೀಶ್ ಪೈ, ಪ್ರಕಾಶ್ ಆಚಾರ್ಯ ಅವರುಗಳು ಆಗಮಿಸುವರು.