ಗುಡ್ಡೆಹೊಸೂರು, ಆ. 14: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರಿಂದ ಆನೆಕಾಡು ವಿಭಾಗದ ರಸ್ತೆ ಬದಿಯಲ್ಲಿ ಸ್ವಚ್ಛ ಭಾರತ್ ಘೋಷಣೆಯಡಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಎಂ.ಆರ್. ಉತ್ತಪ್ಪ, ಜಿ.ಎಂ. ಸಲಿ ಕೆ.ಆರ್. ನಿತ್ಯ, ಶಶಿ, ಪ್ರಕಾಶ್, ಅಭಿರಂಗ, ಮುಳ್ಳುಸೋಗೆ ಮಹೇಂದ್ರ, ವಿನು, ರಂಗನಾಥ್, ಸತೀಶ್ ಮುಂತಾದವರು ಪಾಲ್ಗೊಂಡಿದ್ದರು.